Ayodhya: ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ಮನಮೆಡಿಯುವ ಘಟನೆಯೊಂದು ನಡೆದಿದ್ದು ಮದುವೆಯ ಮೊದಲ ರಾತ್ರಿಯೇ ನವ ವಧು ವರ ಸಾವನ್ನಪ್ಪಿರುವಂತಹ ಪ್ರಕರಣ ಬೆಳಕಿಗೆ ಬಂದಿದೆ.
ಮಾರ್ಚ್ 7 ರಂದು ಅಯೋಧ್ಯೆ(Ayodhya)ಯಲ್ಲಿ ಮದುವೆ ಇತ್ತು. ಮಾರ್ಚ್ 8 ರಂದು ವಧು ಹೊರಟು ತನ್ನ ಅತ್ತೆಯ ಮನೆಗೆ ಬಂದಿದ್ದಾಳೆ. ಮದುವೆಯ ನಂತರ ಕುಟುಂಬ ಸದಸ್ಯರು ಆರತಕ್ಷತೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಬೆಳಿಗ್ಗೆ ಏಳು ಗಂಟೆಯಾದರೂ ವಧು-ವರರು ಬಾಗಿಲು ತೆರೆಯದಿದ್ದಾಗ, ಮನೆಯವರಿಗೆ ಅನುಮಾನ ಬಂತು. ಕುಟುಂಬ ಸದಸ್ಯರು ಬಾಗಿಲು ತಟ್ಟಿದರು. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಬಾಗಿಲನ್ನು ಒಡೆದು ಕುಟುಂಬಸ್ಥರು ಒಳಗಡೆ ಹೋಗಿ ನೋಡಿದಾಗ ಅವರೆಲ್ಲರಿಗೂ ದೊಡ್ಡ ಅಘಾತ ಕಾದಿತ್ತು. ಯಾಕೆಂದರೆ ಕೋಣೆಯಲ್ಲಿನ ಹಾಸಿಗೆಯ ಮೇಲೆ ವಧು ಸತ್ತು ಬಿದ್ದಿದ್ದರೆ, ವರನು ಚಾವಣಿಯ ಕೊಕ್ಕೆಯಿಂದ ನೇತಾಡುತ್ತಿದ್ದನು.
ಅಯೋಧ್ಯೆಯ ಪೊಲೀಸ್ ಠಾಣೆ ಕಂಟೋನ್ಮೆಂಟ್‌ನ ಸಹದತ್‌ಗಂಜ್ ಮುರಾವನ್ ಟೋಲಾದಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
