News of death: ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ಟ್ಯೂಷನ್‌ಗೆ ತೆರಳುತ್ತಿದ್ದ 10ನೇ ತರಗತಿ ವಿದ್ಯಾರ್ಥಿಗೆ ಬೆಂಕಿ ಹಚ್ಚಿದ ಘನ ಘೋರ ದುರಂತ ಘಟನೆಯೊಂದು (News of death) ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದಲ್ಲಿ 15 ವರ್ಷದ ಬಾಲಕನ ಪೆಟ್ರೋಲ್ ಸುರಿದು \ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ಅಲ್ಲದೇ ಪೆಟ್ರೋಲ್ ಸುರಿದು ವಿದ್ಯಾರ್ಥಿಯನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ವೆಂಕಿ ಎಂಬ ಹೆಸರನ್ನು ಕನವರಿಸುತ್ತಲ್ಲೇ ಇದ್ದಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಅಮರನಾಥ್ ಎಂಬ ವಿದ್ಯಾರ್ಥಿ ಇತರ ಮೂವರ ಹೆಸರನ್ನೂ ಹೇಳುತ್ತಿದ್ದನು ಎಂದು ಆಂಬ್ಯುಲೆನ್ಸ್ ಸಿಬ್ಬಂದಿ ತಿಳಿಸಿದ್ದಾರೆ. ಆಸ್ಪತ್ರೆಯ ಬಳಿ ತಲುಪುತ್ತಿದ್ದಂತೆ ಸುಟ್ಟ ಗಾಯಗಳಿಂದ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ಘಟನೆಯನ್ನು ಕಂಡು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು ಅಲ್ಲದೇ ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ. 21 ವರ್ಷದ ವೆಂಕಟೇಶ್ವರ್ ತನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿಯ ಕುಟುಂಬ ದೂರಿನಲ್ಲಿ ಆರೋಪವನ್ನು ಮಾಡಿದ್ದಾರೆ ಎಂದು ಬಾಪಟ್ಲಾ ಪೊಲೀಸ್ ಅಧಿಕಾರಿ ವಕುಲ್ ಜಿಂದಾಲ್ ಎನ್ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: Health tips: ನಿಮ್ಮ ಮೂತ್ರದ ಬಣ್ಣವೂ ಬದಲಾಗಿದೆಯಾ? ಈ ಗಂಭೀರ ಸಮಸ್ಯೆಗಳ ಸೂಚನೆ
