Home » Satish Jarkiholi: ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೋಳಿ! ತುಮಕೂರಿನಲ್ಲಿ ಮತ್ತೆ ಕೇಳಿ ಬಂದ ದಲಿತ ಸಿಎಂ ಕೂಗು

Satish Jarkiholi: ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೋಳಿ! ತುಮಕೂರಿನಲ್ಲಿ ಮತ್ತೆ ಕೇಳಿ ಬಂದ ದಲಿತ ಸಿಎಂ ಕೂಗು

0 comments

Satish Jarkiholi: ಸಚಿವ ಸತೀಶ್ ಜಾರಕಿಹೋಳಿ( Sathish jaraki holi) ಮುಂದೆಯೇ ಅವರೇ ಮುಂದಿನ ಮುಖ್ಯಮಂತ್ರಿ(CM) ಎಂಬ ಘೋಷಣೆ‌ ಕೂಗಲಾಯ್ತ. ಮುಂದಿನ ಸಿಎಂ ಸತೀಶ್ ಜಾರಕಿಹೋಳಿ ಎಂದು ಘೋಷಣೆ ಕೂಗಿ ದಲಿತ(Dalit) ನಾಯಕರು ಜೈಕಾರ ಹಾಕಿದ ಘಟನೆ ಇಂದು ನಡೆದಿದೆ.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ತುಮಕೂರಿನ ಎಂಪ್ರೇಸ್ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.‌ಈ ವೇಳೆ ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೋಳಿ ಭಾಗಿಯಾಗಿದ್ದರು.

ಮತ್ತೆ ಸಚಿವ ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ತಲೆ ದಂಡ ಬಗ್ಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವ ಬೆನ್ನಲ್ಲೇ ಈ ನಾಯಕ ಭೇಟಿ ಕುತೂಹಲ ಕೆರಳಿಸಿದೆ. ತುಮಕೂರಿನ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಚಿವರಿಬ್ಬರು ಮತ್ತೆ ಭೇಟಿಯಾಗಿದ್ದಾರೆ. ಇದು ಗೃಹ ಸಚಿವ ಪರಮೇಶ್ವರ್ ಒಡೆತನದ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜು.

ಮೊನ್ನೆಯಷ್ಟೇ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯನ್ನ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದರು. ಅದಕ್ಕೂ ಮುನ್ನ ಹಲವು ಬಾರಿ ಇಬ್ಬರು ಭೇಟಿ ನಡೆಸಿದ್ದರು. ಇದೀಗ ಮತ್ತೆ ಇಬ್ಬರು ಸಚಿವರು ದಿಡೀರ್ ಭೇಟಿ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ರಾಜೀನಾಮೆ ಕೂಗು ಜೋರಾಗಿರೋ ಬೆನ್ನಲ್ಲೇ ಪದೇಪದೇ ಭೇಟಿ ನಡೆಸಿ ಉಭಯ ಸಚಿವರು ಸಭೆ ನಡೆಸುತ್ತಿದ್ದಾರೆ.

You may also like

Leave a Comment