Home » Nikhil Kumaraswamy: ನಿಖಿಲ್‌ ಸೋಲಿನಿಂದ ಬೇಸರ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

Nikhil Kumaraswamy: ನಿಖಿಲ್‌ ಸೋಲಿನಿಂದ ಬೇಸರ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

0 comments
Nikhil Kumaraswamy

Nikhil Kumaraswamy: ನಿಖಿಲ್‌ ಸೋಲಿನಿಂದ ಬೇಸರದಿಂದ ಅಭಿಮಾನಿ ಒಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ. ಹೌದು, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಸೋಲಿನಿಂದ ಬೇಸರಗೊಂಡು ಅಭಿಮಾನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಚನ್ನಪಟ್ಟಣದ (Channapatna) ಶ್ರೀರಾಂಪುರ ಗ್ರಾಮದ ಮಂಜುನಾಥ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಕಳೆದ 15 ವರ್ಷಗಳಿಂದ ಜೆಡಿಎಸ್‌ ಕಾರ್ಯಕರ್ತನಾಗಿರುವ ಮಂಜುನಾಥ್‌, ನಿಖಿಲ್‌ ಅಪ್ಪಟ ಅಭಿಮಾನಿಯಾಗಿದ್ದರು, ಹೀಗಾಗಿ ನಿಖಿಲ್‌ ಸೋಲಿನಿಂದ ಬೇಸರಗೊಂಡು, ವಿಷ ಸೇವಿಸಿದ್ದರು. ಬಳಿಕ ಅವರನ್ನ ಮಂಡ್ಯದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿಖಿಲ್‌, ಬೆಳಗ್ಗೆ 7 ಗಂಟೆ ಸುಮಾರಿಗೆ ಮಂಜುನಾಥ್ ವಿಚಾರ ಗೊತ್ತಾಯ್ತು. ಚುನಾವಣಾ ಏರುಪೇರು, ಸೋಲು ಗೆಲುವು ಇದ್ದೇ ಇರುತ್ತೆ. ಆದರೆ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಇಂಥ ಕಷ್ಟದ ಪರಿಸ್ಥಿತಿಗೆ ನಿಮ್ಮ ಕುಟುಂಬವನ್ನ ದೂಡಬೇಡಿ. ಸೋಲು ಗೆಲುವು ಇದ್ದಿದ್ದೇ, ದಯವಿಟ್ಟು ಇಂತಹ ಕೆಲಸಗಳಿಗೆ ಮುಂದಾಗಬೇಡಿ ಎಂದು ಮನವಿ ಮಾಡಿದರು.

You may also like

Leave a Comment