7
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬರಾಸತ್ ನಿಂದ ಬಂದಿದ್ದ ಎರಡು ಸ್ಯಾಂಪಲ್‌ಗಳಲ್ಲಿ ನಿಫಾ ವೈರಾಣು ಪತ್ತೆಯಾಗಿದೆ ಎಂದು ಪುಣೆಯ ರಾಷ್ಟ್ರೀಯ ವೈರಾಲಜಿ ಇನ್ಸ್‌ಟಿಟ್ಯೂಟ್ ಖಚಿತಪಡಿಸಿದೆ. ಸೋಂಕಿತ ಶುಶೂಷಣಾ ಅಧಿ ಕಾರಿಯೊಂದಿಗೆ ಸಂಪರ್ಕ ಹೊಂದಿದ್ದ ಬರಾಸತ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗೆ ನಿಫಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿವೆ.
ಒಬ್ಬ ಶುಶೂಷಣಾ ಅಧಿಕಾರಿ ಪೂರ್ವ ಬರ್ಧಮಾನ್ ಜಿಲ್ಲೆಯ ಕಟ್ಟಾದಿಂದ ಹಿಂದಿರುಗಿದ್ದರು. ಅಲ್ಲಿಯೇ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಮತ್ತೊಬ್ಬರು ಭಾರತ- ಬಾಂಗ್ಲಾದೇಶ ಗಡಿ ಸಮೀಪದ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಫುಗ್ರಗಾಚಿಗೆ ಪ್ರಯಾಣಿಸಿದ್ದರು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
