3
Niraj chopra: ಶುಕ್ರವಾರ ಮೇ 16 ರಂದು ಕತಾರ್‌ನ ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಸರಣಿಯ ಪುರುಷರ ಜಾವೆಲಿನ್ ಎಸೆತದಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Niraj chopra)90.23 ಮೀಟರ್ ಜಾವೆಲಿನ್ ಎಸೆದು ಭಾರತದ ಪರ ಇತಿಹಾಸ ಬರೆದಿದ್ದಾರೆ.
ನೀರಜ್ ಚೋಪ್ರಾ 88.44 ಮೀಟರ್ ಜಾವೆಲಿನ್ ಎಸೆದು ಆರಂಭಿಕ ಮುನ್ನಡೆ ಸಾಧಿಸಿದ್ದರು. ಕೊನೆಯ ಎಸೆತದಲ್ಲಿ 90.23 ಮೀಟರ್ ದೂರಕ್ಕೆ ಎಸೆದು ದೋಹಾ ಡೈಮಂಡ್ ಲೀಗ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿ ಹಾಲಿ ವಿಶ್ವ ಚಾಂಪಿಯನ್ ಮತ್ತೊಮ್ಮೆ 90 ಮೀಟರ್ ಜಾವೆಲಿನ್ ಎಸೆಯುವ ಮೂಲಕ ತನ್ನ ಹಳೆ ದಾಖಲೆಯನ್ನೇ ಮುರಿದಿದ್ದಾರೆ.
