Home » Nithya Menen Pregnancy : ಅರೇ ಇದೇನಿದು, ಮದುವೆಗೆ ಮುನ್ನವೇ ತಾಯಿಯಾದಳೇ ಖ್ಯಾತ ನಟಿ?

Nithya Menen Pregnancy : ಅರೇ ಇದೇನಿದು, ಮದುವೆಗೆ ಮುನ್ನವೇ ತಾಯಿಯಾದಳೇ ಖ್ಯಾತ ನಟಿ?

0 comments

ತನ್ನ ಸಹಜ ಅಭಿನಯದ ಮೂಲಕ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಮೈನಾ ಚಿತ್ರದ ಖ್ಯಾತಿಯ ನಿತ್ಯಾ ಮೆನನ್ ಬಗ್ಗೆ ಹೊಸ ಹಸಿಬಿಸಿ ಸುದ್ದಿಯೊಂದು ಹರಿದಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ನಿತ್ಯಾ ಮೆನನ್ ಗರ್ಭಿಣಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಮದುವೆಯೇ ಆಗದೇ ಗರ್ಭಧಾರಣೆಯ ಪರೀಕ್ಷಾ ಕಿಟ್‌ನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನಟಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಗೊಂದಲ ಮನೆ ಮಾಡಿದೆ.

ಈ ಚಿತ್ರ ವೈರಲ್ ಆಗುತ್ತಿದ್ದಂತೆ ನಟಿಗೆ ಅಭಿಮಾನಿಗಳು ತಾಯಿಯಾಗುವುದಕ್ಕೆ ಶುಭಾಶಯಗಳ ಸುರಿಮಳೆಗೈಯುತ್ತಿದ್ದರೆ ಇದನ್ನು ಕಂಡ ಜನ ಬೆರಗಾಗಿ ಈ ವಿಚಾರದ ಕುರಿತು ಚಿಂತನೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ನಿತ್ಯಾ ಮೆನನ್ ಸೂಪರ್ ಸ್ಟಾರ್ ಧನುಷ್ ಅವರ ‘ತಿರುಚಿತಾಂಬಲಂ’ ನಲ್ಲಿಯೂ ಕೂಡ ಕಾಣಿಸಿಕೊಂಡು ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಿಟ್ ಕೂಡ ಆಗಿತ್ತು.

ಇದರ ಬಳಿಕ ನಿತ್ಯಾ ಮೆನನ್ ಅವರು ‘ಬ್ರೀತ್’ ವೆಬ್ ಸರಣಿಯಲ್ಲಿ ಅಭಿಷೇಕ್ ಬಚ್ಚನ್ ಅವರ ಎದುರು ಕೆಲಸ ಮಾಡಿದ್ದಾಳೆ ಎಂಬ ವಿಚಾರ ಟ್ರೆಂಡ್ ಆಗಿ, ಅನೇಕ ಅಭಿಮಾನಿ ಬಳಗವನ್ನು ಪಡೆದದ್ದು ತಿಳಿದ ವಿಷಯವೇ!! .

‘ಬ್ರೀತ್’ ವೆಬ್ ಸಿರೀಸ್ ನಲ್ಲಿ ಅಭಿಷೇಕ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿದ್ದ ನಟಿ ನಿತ್ಯಾ ಮೆನನ್ ಈ ಹಿಂದೆ ಮದುವೆಯ ಸುದ್ದಿಯಿಂದ ಭಾರಿ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದರು . ಆದರೆ ಈ ಗಾಸಿಪ್ಗಳಿಗೆ ಬ್ರೇಕ್ ನೀಡಲು ನಟಿಯೇ ಸುಳ್ಳು ಸುದ್ದಿಯೆಂದೂ ಆ ವಿಷಯವನ್ನು ತಳ್ಳಿಹಾಕಿದ್ದರು.

ಇದೀಗ ನಟಿ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರೆಗ್ನೆನ್ಸಿ ಕಿಟ್‌ನ ಚಿತ್ರವನ್ನು ಹಂಚಿಕೊಂಡಿದ್ದು, ಈ ಫೋಟೋ ಪೋಸ್ಟ್ ಗೆ ನಿತ್ಯಾ “ಅಂಡ್ ದಿ ವಂಡರ್ ಬಿಗಿನ್ಸ್” ಎಂದು ಶೀರ್ಷಿಕೆ ನೀಡಿದ್ದಾರೆ.

ಇದನ್ನು ನೋಡಿದ ಕುಟುಂಬಸ್ಥರಿಂದ ಮತ್ತು ಸ್ನೇಹಿತರಿಂದ ಅಭಿನಂದನೆಗಳು ಬರಲಾರಂಭಿಸಿದ್ದು, ನಟಿಯ ಪೋಸ್ಟ್‌ಗೆ ಹಲವರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ನಟಿ ಇನ್ನೂ ಮದುವೆಯಾಗದ ಕಾರಣ ನಿತ್ಯಾಳ ಈ ಪೋಸ್ಟ್‌ನಿಂದ ಹಲವು ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆ ನಿಜವಾಗಿಯೂ ಗರ್ಭಿಣಿಯಾಗಿದ್ದಾಳೆ ಎಂದು ಭಾವಿಸಿದರೆ, ಉಳಿದವರು ಈ ಗರ್ಭಧಾರಣೆಯ ಸರ್ಪ್ರೈಸ್ ಖಂಡಿತವಾಗಿಯೂ ನಟಿಯ ಮುಂಬರುವ ಚಿತ್ರದ ಪ್ರಚಾರದ ಭಾಗವಾಗಿದೆ ಎಂದು ನಂಬಿದ್ದಾರೆ.

You may also like

Leave a Comment