1
Madhu Bangarappa: 2025-26ರ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ಜೂ.1 ಕ್ಕೆ ಮಕ್ಕಳಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ ಯಾವುದೇ ಸಡಿಲಿಕೆ ಇಲ್ಲ. ಇಲಾಖಾ ನಿಯಮಗಳನ್ನು ಈ ವಿಷಯವಾಗಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ವಿಷಯವಾಗಿ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಕೂಡಾ ಅವರ ಅರ್ಜಿಗಳನ್ನು ವಜಾ ಮಾಡಿದೆ. ನ್ಯಾಯಾಲಯ ಏನೇ ಆದೇಶ ಕೊಟ್ಟರೂ ನಾವು ಅದನ್ನು ಅನುಸರಿಸುತ್ತೇವೆ ಎಂದು ಹೇಳಿದರು. ನಿಯಮದ ಪ್ರಕಾರ ನಡೆಯಬೇಕು, ಒಂದು ತಿಂಗಳು, ಎರಡು ತಿಂಗಳು ಕಡಿಮೆ ಇರುವವರಿಗೆ ಅವಕಾಶ ಕೊಡಿ ಎಂದು ಕೇಳುತ್ತಾರೆ. ಇದೆಲ್ಲ ಚರ್ಚೆ ಆಗುವ ವಿಷಯ. ಇದೆಲ್ಲ ಕೋರ್ಟ್‌ನಲ್ಲಿದೆ. ಕೋರ್ಟ್‌ನಲ್ಲಿ ತೀರ್ಪು ಬಂದರೆ ನಾವು ಏನಾದರೂ ನಿರ್ಧಾರ ಮಾಡಬಹುದು. ಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
