Instant Beer Powder: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಆದರೆ ಬೇಡ ಬೇಡ ಎಂದರೂ ಕೆಲವ್ರು ಕುಡಿತದ ದಾಸರಾಗುತ್ತಾರೆ. ಅದರಲ್ಲೂ ಸರ್ಕಾರ ಎಷ್ಟೇ ಬೆಲೆ ಏರಿಕೆ ಮಾಡಿದರೂ ಕ್ಯಾರೇ ಅನ್ನದ ಮದ್ಯ ಪ್ರೇಮಿಗಳು ಒಟ್ಟಿನಲ್ಲಿ ಖುಷಿಯಾದರೂ, ದುಃಖವಾದರೂ ಒಂದು ಪೆಗ್ ಹಾಕಬೇಕು ಅನ್ನೋ ಮೆಂಟಾಲಿಟಿನಲ್ಲಿ ಇರುತ್ತಾರೆ. ಆದರೆ ಮದ್ಯಪಾನ ಮಾಡಬೇಕು ಎಂದರೆ ಬಾರ್‌ಗೆ ಹೋಗಬೇಕು. ಆದರೆ ಈ ಸಮಸ್ಯೆಯನ್ನು ಹೋಗಲಾಡಿಸಲಿದೆ ಈ ಪೌಡರ್. ಈ ಫೌಡರ್ ಮೂಲಕ ನೀವು ಮನೆಯಲ್ಲೇ ಬಿಯರ್ ತಯಾರು ಮಾಡಿಕೊಳ್ಳಬಹುದು.
ಕಿಂಗ್ ಫಿಶರ್ ಬಿಯರ್ ಪೌಡರ್:ಹೌದು, ಕಿಂಗ್ ಫಿಶರ್ ಕಂಪನಿ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಕೆಲವು ವರ್ಷಗಳ ಹಿಂದೆಯೇ ಬಿಡುಗಡೆ ಮಾಡಿದೆ. ಅದುವೇ ಬಿಯರ್ ಪೌಡರ್. ಕಿಂಗ್‌ಫಿಷರ್ ನಮ್ಮ ದೇಶದಲ್ಲಿ ಬಿಯರ್‌ನ ಕಿಂಗ್ ಮೇಕರ್ ಆಗಿದ್ದು, ಪ್ರಮುಖ ಬಿಯರ್ ಬ್ರಾಂಡ್ ಆಗಿರುವ ಕಿಂಗ್ ಫಿಶರ್ ತ್ವರಿತ ಬಿಯರ್ ಪ್ಯಾಕೆಟ್ (Instant Beer Powder) ಗಳನ್ನು ಬಿಡುಗಡೆ ಮಾಡಿದೆ.
ಯುನೈಟೆಡ್ ಬ್ರೂವರೀಸ್ ಗ್ರೂಪ್ ಕಿಂಗ್‌ಫಿಶರ್ ಇನ್‌ಸ್ಟಂಟ್ ಬಿಯರ್ ಅನ್ನು ಬಿಡುಗಡೆ ಮಾಡಿದ್ದು, ದೇಶದ ಮಾದಕ ವ್ಯಸನಿಗಳಿಗೆ ಫ್ರೀಜ್ ಡ್ರೈಯಿಂಗ್ ತಂತ್ರಜ್ಞಾನದೊಂದಿಗೆ ಬಿಯರ್ ಸ್ಯಾಚೆಟ್ಸ್ ಪೌಡರ್ ಅನ್ನು ಪರಿಚಯಿಸಲಾಗಿದ್ದು, ಈ ಬಿಯರ್ ಪೌಡರ್ ಅನ್ನು ನೀರಿಗೆ ಮಿಕ್ಸ್ ಮಾಡಿದರೆ ಕ್ಷಣ ಮಾತ್ರದಲ್ಲಿ ಬಿಯರ್ ತಯಾರಾಗಲಿದೆ.
ಕಿಂಗ್ ಫಿಶರ್ ಬಿಯರ್ ಪೌಡರ್ ನಿಂದ ಬಿಯರ್ ತಯಾರಿಸುವ ಸಂಬಂಧ ವಿಡಿಯೋವೊಂದು ಯೂಟ್ಯೂಬ್ ಚಾನೆಲ್ ನಲ್ಲಿ ಸಖತ್ ವೈರಲ್ ಆಗಿದೆ. ಆದರೆ, ಕೆಲವರು ಇದು ನಿಜ ಅಲ್ಲ ಎಂದು ನಿರಾಕರಿಸುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ಖರೀದಿ ಮಾಡುವುದು ಎಲ್ಲಿ ಎಂದು ಜಾಲಾಡುತ್ತಿದ್ದಾರೆ. ಅಲ್ಲದೆ ನಿಮ್ಮ ಭಾವನೆಗಳ ಜೊತೆಗೆ ಆಟ ಆಡವಾಡಬೇಡಿ ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.

ಇನ್ನೊಂದು ಕಡೆ ಈ ಪೌಡರ್ ಇನ್ನೂ ಸಹ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಇದನ್ನು ಪರಿಚಯಿಸಿದರೆ ಏನೆಲ್ಲಾ ಸಮಸ್ಯೆ ಆಗಲಿದೆ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ. ಈಗಲೇ ಎಲ್ಲೆಂದರಲ್ಲಿ ಕುಡಿಯುವ ಜನರು ಈ ರೀತಿ ಪಾಕೆಟ್ ಸಿಕ್ಕರೆ ಬೇಕು ಎಂದಾಗಲೆಲ್ಲಾ ನೀರಿನ ಬದಲು ಅದನ್ನೇ ಕುಡಿಯುತ್ತಾರೆ. ಇದರಿಂದ ಯುವ ಪೀಳಿಗೆ ಕೆಟ್ಟ ದಾರಿಯಲ್ಲಿ ಸಾಗಲಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
