Home » ನಮ್ಮಿಂದ ತಪ್ಪಾಗಿದೆ ಕ್ಷಮಿಸಿ- ಕನ್ನಡಿಗರ ಕ್ಷಮೆ ಕೋರಿದ ಕಂಪನಿ

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ- ಕನ್ನಡಿಗರ ಕ್ಷಮೆ ಕೋರಿದ ಕಂಪನಿ

0 comments
Laptops To Students

ಬೆಂಗಳೂರು: ಖಾಸಗಿ ಕಂಪನಿಯೊಂದು non Kannadiga HR ಕೆಲಸಕ್ಕೆ ಬೇಕು ಎಂದು ಪ್ರಕಟಣೆಯನ್ನು ಹೊರಡಿಸಿದ್ದು, ಇದು ಕನ್ನಡಿಗರನ್ನು ಕೆರಳಿಸಿದ್ದು, ಇದೀಗ ಆ ಖಾಸಗಿ ಕಂಪನಿ ಕ್ಷಮೆಯಾಚನೆ ಮಾಡಿದೆ.

ಸ್ಕಿಲ್‌ ಸೋನಿಕ್ಸ್‌ ಎಂಬ ಕಂಪನಿ ನಾನ್‌ ಕನ್ನಡಿಗ ಹೆಚ್‌ ಆರ್‌ ಕೆಲಸಕ್ಕೆ ಬೇಕು ಎಂದು ಪ್ರಕಟಣೆಯೊಂದನ್ನು ನೌಕರಿ ಡಾಟ್‌ ಕಾಮ್‌ನಲ್ಲಿ ಹಾಕಿತ್ತು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ನಂತರ ಕನ್ನಡ ಸಂಘಟನೆಯವರು ಜೆಪಿ ನಗರದ ಸಂಸ್ಥೆಯ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದರು. ಈ ವರದಿ ಮಾಧ್ಯಮದಲ್ಲಿ ಪ್ರಕಟಗೊಳ್ಳುತ್ತಲೇ ಸ್ಕಿಲ್‌ ಸೋನಿಕ್ಸ್‌ ಕಂಪನಿ ಮ್ಯಾನೇಜರ್‌ ಕ್ಷಮೆ ಕೋರಿದ್ದಾರೆ.

ಇದು ಕೋಲ್ಕತ್ತಾ ವಿಭಾಗದಿಂದ ಆದ ಪ್ರಮಾದ. ಕನ್ನಡಿಗರ ವಿರೋಧದ ಬಳಿಕ ಈ ನೇಮಕಾತಿ ಪ್ರಕಟಣೆ ರದ್ದು ಮಾಡಿದ್ದು, ಅಚಾತುರ್ಯದಿಂದ ಆಗಿರುವ ಘಟನೆಗೆ ಕ್ಷಮೆ ಇರಲಿ ಎಂದು ಕೈ ಮುಗಿದು ಕನ್ನಡಿಗರನ್ನು ಕ್ಷಮೆಯಾಚಿಸಿದ್ದಾರೆ.

You may also like