Home » Kamal Hassan:‌ ಬೆದರಿಕೆಗೆ ಹೆದರುವುದಿಲ್ಲ, ಕ್ಷಮೆ ಕೇಳೋದೇ ಇಲ್ಲ- ಪಟ್ಟು ಹಿಡಿದ ಕಮಲ್

Kamal Hassan:‌ ಬೆದರಿಕೆಗೆ ಹೆದರುವುದಿಲ್ಲ, ಕ್ಷಮೆ ಕೇಳೋದೇ ಇಲ್ಲ- ಪಟ್ಟು ಹಿಡಿದ ಕಮಲ್

0 comments

Kamal Hassan: ಇತ್ತೀಚೆಗೆ ಕಮಲ್ ಹಾಸನ್ ಕನ್ನಡದ ಕುರಿತಾಗಿ ಕೊಟ್ಟಿರುವ ಹೇಳಿಕೆಯೆಂದು ವಿವಾದದ ಸೃಷ್ಠಿಗೆ ಕಾರಣವಾಗಿದ್ದು, ಈ ಕುರಿತಾಗಿ ಕಮಲ್ ಹಾಸನ್ ಕ್ಷಮೆ ಕೋರಬೇಕು ಇಲ್ಲವಾದಲ್ಲಿ ಥಗ್ ಸಿನಿಮಾ ವನ್ನು ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಫಿಲ್ಮ್ ಛೇಂಬರ್ ಹೇಳಿಕೆ ನೀಡಿದೆ. ಹಲವಾರು ಕಡೆ ಈ ಕುರಿತಾಗಿ ಪ್ರತಿಭಟನೆಗಳು ಕೂಡ ನಡೆಯುತ್ತಿವೆ.

ಇದರ ಕುರಿತಾಗಿ ಮೇ 30 ರಂದು ಚೆನ್ನೈನಲ್ಲಿ ಮಾತನಾಡಿರುವ ಕಮಲ್ ಹಾಸನ್ ತಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದು,ನನ್ನಿಂದ ತಪ್ಪು ಆಗಿದ್ದರೆ ಮಾತ್ರ ಕ್ಷಮೆಯಾಚಿಸುವೆ, ನನ್ನಿಂದ ತಪ್ಪು ಆಗಿಲ್ಲ, ಹಾಗಾಗಿ ನಾನು ಕ್ಷಮೆ ಕೇಳಲ್ಲ, ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ, ನಾನು ಕಾನೂನು & ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ’ ಎಂದು ಹೇಳಿದ್ದಾರೆ.

ಥಗ್ ಲೈಫ್’ನ ಕರ್ನಾಟಕದ ವಿತರಣೆ ಹಕ್ಕನ್ನು ಖರೀದಿಸಿರುವ ವೆಂಕಟೇಶ್ ಅವರನ್ನು ನಿನ್ನೆ ಫಿಲಂ ಚೇಂಬರ್​ಗೆ ಕರೆಸಿ ಸಭೆ ನಡೆಸಲಾಗಿದ್ದು, ಕಮಲ್ ಹಾಸನ್ ಬಳಿ ಕ್ಷಮೆ ಕೇಳಿಸುವ ಜವಾಬ್ದಾರಿಯನ್ನು ವೆಂಕಟೇಶ್ ಹೆಗಲಿಗೆ ಹಾಕಲಾಗಿತ್ತು. ಅವರು ಕೂಡ ಕಮಲ್ ಅವರಿಗೆ ಮನವರಿಕೆ ಮಾಡುತ್ತೇನೆ ಎಂದಿದ್ದು ಇದಾದ 24 ಗಂಟೆಗಳ ಒಳಗೆ ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ಹೇಳಿದ್ದಾರೆ.

You may also like