Home » Kyle Gordy kids: ಮದುವೆಯಾಗಿಲ್ಲ, ಯಾರನ್ನು ಮುಟ್ಟೋದು ಇಲ್ಲ- ಆದ್ರೂ 87 ಮಕ್ಕಳ ತಂದೆ ಈತ, 100 ಮಕ್ಕಳನ್ನು ಹುಟ್ಟಿಸುವುದೇ ಈತನ ಗುರಿ

Kyle Gordy kids: ಮದುವೆಯಾಗಿಲ್ಲ, ಯಾರನ್ನು ಮುಟ್ಟೋದು ಇಲ್ಲ- ಆದ್ರೂ 87 ಮಕ್ಕಳ ತಂದೆ ಈತ, 100 ಮಕ್ಕಳನ್ನು ಹುಟ್ಟಿಸುವುದೇ ಈತನ ಗುರಿ

0 comments

Kyle Gordy kids : ಮದುವೆಯ ಬಳಿಕ ಮಕ್ಕಳಾಗುವುದು ಒಂದು ಸಾಮಾನ್ಯ ಕ್ರಿಯೆ. ಆದರಿಂದ ಬದಲಾದ ಕಾಲಮಾನದಲ್ಲಿ ಮದುವೆಗೂ ಮುಂಚೆ ಮಕ್ಕಳನ್ನು ಪಡೆಯುವುದು, ಮದುವೆಯಾಗದೆ ಮಕ್ಕಳನ್ನು ಹೆರುವುದು, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಮಾಡಿಕೊಳ್ಳುವುದನ್ನೆಲ್ಲ ಇಂದು ಕಾಣುತ್ತಿದ್ದೇವೆ. ಆದರೆ ಈಗ ಅಚ್ಚರಿ ಎಂಬಂತೆ ಇಲ್ಲೊಬ್ಬ ಯುವಕ ಮದುವೆಯೂ ಆಗಿಲ್ಲ, ಯಾವ ಹೆಣ್ಣು ಮಕ್ಕಳನ್ನು ಮುಟ್ಟಿಯೂ ಇಲ್ಲ. ಆದರೆ ಬರೋಬ್ಬರಿ 87 ಮಕ್ಕಳ ಹುಟ್ಟಿಗೆ ಕಾರಣನಾಗಿದ್ದಾನೆ. ಅಷ್ಟೇ ಅಲ್ಲದೆ ಸುಮಾರು 100 ಮಕ್ಕಳನ್ನು ಹುಟ್ಟಿಸುವುದೇ ಈತನ ಗುರಿಯಂತೆ!!

ಹೌದು, ‘ದಿ ಸನ್’ ವೆಬ್‌ಸೈಟ್‌ನ ವರದಿಯ ಪ್ರಕಾರ, ಕ್ಯಾಲಿಫೋರ್ನಿಯಾದ 32 ವರ್ಷದ ಕೈಲ್ ಗೋರ್ಡಿ ಇದುವರೆಗೆ 87 ಮಕ್ಕಳಿಗೆ ತಂದೆಯಾಗಿದ್ದಾರೆ. ಈತನ ಮಕ್ಕಳು ವಿಶ್ವದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಶೀಘ್ರದಲ್ಲೇ 100 ಮಕ್ಕಳ ತಂದೆಯಾಗುವ ಗುರಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಅಂದಹಾಗೆ 2025ರ ಅಂತ್ಯದ ವೇಳೆಗೆ 100 ಮಕ್ಕಳಿಗೆ ತಂದೆಯಾಗುವುದು ಕೈಲ್‌ ಕನಸು. ಈ ‘ಶತಕವೀರ್’ ಪ್ರಪಂಚದಾದ್ಯಂತ ಮಕ್ಕಳಿಲ್ಲದ ದಂಪತಿಗಳಿಗೆ ಸಹಾಯ ಮಾಡುತ್ತಿದ್ದಾನೆ.. ಅವರ ಮುಖದಲ್ಲಿ ನಗುವನ್ನು ತರುತ್ತಿದ್ದಾನೆ. ಜನರು ನಿರಂತರವಾಗಿ ಇವರ ಸಹಾಯವನ್ನು ಕೇಳುತ್ತಿದ್ದಾರೆ. ಇಲ್ಲ ಅನ್ನದೆ.. ಎಲ್ಲರಿಗೂ ವೀರ್ಯ ನೀಡುತ್ತಾನೆ ಈತ. ಅಲ್ಲದೆ ಈ ಕೆಲಸಕ್ಕೆ ಒಂದು ರೂ. ಹಣ ತೆಗೆದುಕೊಳ್ಳುವುದಿಲ್ಲ.

ಇನ್ನೂ ಕೈಲ್‌ ‘ಬಿ ಪ್ರೆಗ್ನೆಂಟ್ ನೌ’ ಎಂಬ ವೆಬ್‌ಸೈಟ್ ಅನ್ನು ಹೊಂದಿದ್ದಾರೆ, ಅಲ್ಲಿ ಜನರು ಅವರನ್ನು ಸಂಪರ್ಕಿಸುತ್ತಾರೆ. ಇದಲ್ಲದೆ, ಈತ ತನಗಾಗಿ ಜೀವನ ಸಂಗಾತಿಯನ್ನು ಹುಡುಕುತ್ತಿದ್ದಾನೆ.

You may also like