Home » Anna bhagya Scheme: ಅನ್ನಭಾಗ್ಯದ ಅಕ್ಕಿ ದುಡ್ಡು ಸದ್ಯಕ್ಕಿಲ್ಲ, ಕೊನೆಗೂ ಮಾತು ತಪ್ಪಿದ ಗೌರ್ಮೆಂಟ್.. !! ಅಚ್ಚರಿ ಮೂಡಿಸಿದ ಸಿಎಂ ಹೇಳಿಕೆ?

Anna bhagya Scheme: ಅನ್ನಭಾಗ್ಯದ ಅಕ್ಕಿ ದುಡ್ಡು ಸದ್ಯಕ್ಕಿಲ್ಲ, ಕೊನೆಗೂ ಮಾತು ತಪ್ಪಿದ ಗೌರ್ಮೆಂಟ್.. !! ಅಚ್ಚರಿ ಮೂಡಿಸಿದ ಸಿಎಂ ಹೇಳಿಕೆ?

by ಹೊಸಕನ್ನಡ
0 comments
Anna bhagya Scheme

Anna bhagya Scheme: ಅನ್ನಭಾಗ್ಯ ಯೋಜನೆ(Anna bhagya Scheme) ರಾಜ್ಯದಲ್ಲಿ ಶನಿವಾರದಿಂದ ಜಾರಿಗೆ ಬರಲಿದ್ದು, ಶನಿವಾರದಿಂದಲೇ ಫಲಾನುಭವಿಗಳಿಗೆ ಅಕ್ಕಿ ಜೊತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಆಹಾರ ಮೊನ್ನೆ ಮೊನ್ನೆ ತಾನೆ ಸಚಿವ ಕೆಎಚ್‌ ಮುನಿಯಪ್ಪ(K H Muniyappa) ಹೇಳಿದ್ದರು. ಆದರೆ ಇದೀಗ ಈ ಅಕ್ಕಿ ಬದಲಿನ ಹಣದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ(CM Siddaramaiah) ಉಲ್ಟಾ ಹೊಡೆದಿದ್ದಾರೆ.

ಹೌದು, ಕಾಂಗ್ರೆಸ್ ಸರ್ಕಾರ (Congress Govt) ವಿಧಾನಸಭೆ ಚುನಾವಣೆಗೂ(Assembly election) ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ (Five Guarantees) ಪೈಕಿ ಅನ್ನ ಭಾಗ್ಯ ಯೋಜನೆಯೂ ಒಂದು. ಆದರೆ ಸದ್ಯ ಅಕ್ಕಿಯ ಅಭಾವ ಇರುವುದರಿಂದ 5 ಕೆಜಿ ಅಕ್ಕಿ, ಉಳಿದ 5 ಕೆ ಜಿ ಅಕ್ಕಿ ಬದಲು ಹಣ ನೀಡುತ್ತೇವೆ ಎಂದಿದ್ದರೂ ಅದೂ ಕೂಡ ಜುಲೈ ಒಂದರಿಂದಲೇ ಜಾರಿ ಎಂದೆಲ್ಲ ಭರವಸೆ ನೀಡಿದ್ದರು. ಆದರೀಗ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಉಲ್ಟಾ ಹೊಡೆದಿದ್ದು, ಅನ್ನಭಾಗ್ಯ ಯೋಜನೆಯ (Anna Bhagya Scheme) ಹಣ ಜುಲೈ 1ರಂದೇ ಕೊಡ್ತೀವಿ ಅಂತಾ ಹೇಳಿಲ್ಲ. ಈ ತಿಂಗಳು 10ರ ನಂತರ ಕೊಡಲು ಪ್ರಾರಂಭ ಮಾಡುತ್ತೇವೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗೃಹಜ್ಯೋತಿ ಇಂದಿನಿಂದ ಪ್ರಾರಂಭವಾಗುತ್ತಿದೆ, ಈ ತಿಂಗಳು ಉಚಿತವಾಗಿ ನೀಡಲಾಗುವುದು. ಗೃಹಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಬಿಲ್‌ ಆಗಸ್ಟ್ ತಿಂಗಳಲ್ಲಿ ನೀಡಲಾಗುವುದು ಎಂದರು. ಬಳಿಕ ಅನ್ನಭಾಗ್ಯದ ಬಗ್ಗೆ ಪ್ರತಿಕ್ರಿಯಿಸಿ ಜುಲೈ ತಿಂಗಳ ಅಕ್ಕಿ ಬದಲಿಗೆ ದುಡ್ಡನ್ನು ಜುಲೈ 1 ರಂದೇ ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು. ಜುಲೈ 10ರ ನಂತರ ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಆದರೆ ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಸಚಿವ ಕೆಎಚ್‌ ಮುನಿಯಪ್ಪ ಎಂಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ. ಮಾತು ಕೊಟ್ಟಂತೆ ಜುಲೈ 1 ರಿಂದ ಯೋಜನೆ ಜಾರಿ ಆಗುತ್ತೆ. ಈಗ ಅಕ್ಕಿ ಬದಲು ಹಣ ವರ್ಗಾವಣೆ ಮಾಡುತ್ತೇವೆ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ರೆ‌ ನಾವು ಅರ್ಹ ಫಲಾನುಭವಿಗಳಿಗೆ ಅಕ್ಕಿ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದ್ದರು. ಆದರೀಗ ಸಿಎಂ ಮಾತು ಜನರಿಗೆ ನಿರಾಸೆ ಮೂಡಿಸಿದೆ.

 

ಇದನ್ನು ಓದಿ: Titanic ship: ಭಾರಿ ದುರಂತದ ನಂತರ ಮತ್ತೊಮ್ಮೆ ಟೈಟಾನಿಕ್ ಯಾತ್ರೆಗೆ ಜಾಹೀರಾತು ನೀಡಿದ ಸಂಸ್ಥೆ, ದಮ್ ಇದ್ದವರು ಅಪ್ಲೈ ಮಾಡ್ಬೋದು! 

You may also like

Leave a Comment