Home » Bank Holidays in November 2022 : ನವೆಂಬರ್ ನಲ್ಲಿ ಎಷ್ಟು ದಿನ ಬ್ಯಾಂಕ್ ರಜೆ ? ಲಿಸ್ಟ್ ಬಿಡುಗಡೆ

Bank Holidays in November 2022 : ನವೆಂಬರ್ ನಲ್ಲಿ ಎಷ್ಟು ದಿನ ಬ್ಯಾಂಕ್ ರಜೆ ? ಲಿಸ್ಟ್ ಬಿಡುಗಡೆ

0 comments

ಇನ್ನೇನು ಕೆಲವೇ ದಿನಗಳಲ್ಲಿ ನವೆಂಬರ್ ತಿಂಗಳು ಆರಂಭವಾಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಓಡಾಡುವ ತಾಪತ್ರಯವನ್ನು ಕೂಡ ತಪ್ಪಿಸಿದೆ. ಆದರೂ ಕೂಡ ಕೆಲವೊಂದು ಅನಿವಾರ್ಯ ಕಾರ್ಯಗಳಿಗೆ ಬ್ಯಾಂಕ್ಗೆ ಭೇಟಿ ನೀಡಬೇಕಾದ ಪ್ರಸಂಗಗಳು ಎದುರಾಗುತ್ತವೆ.

ಆಗ ಬ್ಯಾಂಕ್ಗಳಿಗೆ ರಜೆ ಇದ್ದರೆ ಅದರ ಅರಿವಿಲ್ಲದೆ ಬ್ಯಾಂಕ್ಗೆ ಭೇಟಿ ನೀಡಿ ಸಮಯ ವ್ಯರ್ಥವಾಗುತ್ತದೆ.

ಇದನ್ನು ತಪ್ಪಿಸಲು ರಜಾ ದಿನಗಳ ಬಗ್ಗೆ ತಿಳಿದುಕೊಂಡರೆ ಒಳಿತು.ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್‌ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ.

ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ.

ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ. ನವೆಂಬರ್ ತಿಂಗಳು ಆರಂಭಕ್ಕೆ ಕೆಲವೇ ದಿನಗಳು ಉಳಿದಿದ್ದು, ಈ ಕಾರಣದಿಂದಾಗಿ, ಮುಂಬರುವ ತಿಂಗಳಲ್ಲಿ ಬ್ಯಾಂಕ್ ಅನ್ನು 10 ದಿನಗಳವರೆಗೆ ಮುಚ್ಚಲಾಗುತ್ತದೆ. ಈ 10 ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರವೂ ಸೇರಿದೆ.

ನವೆಂಬರ್‌ನಲ್ಲಿ ಬ್ಯಾಂಕ್ ರಜೆಯಿರುವ ದಿನಗಳು:

ನವೆಂಬರ್ 1: ಕನ್ನಡ ರಾಜ್ಯೋತ್ಸವ, ಬೆಂಗಳೂರು, ಇಂಫಾಲ್‌ನಲ್ಲಿ ಬ್ಯಾಂಕ್ ರಜೆ

ನವೆಂಬರ್ 6: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್

ನವೆಂಬರ್ 8: ಗುರು ನಾನಕ್ ಜಯಂತಿ/ ಕಾರ್ತಿಕ ಪೂರ್ಣಿಮ/ ರಹಾಸ್ ಪೂರ್ಣಿಮ, ಬ್ಯಾಂಕ್ ಐಜ್ವಾಲ್, ಬೆಲಪುರ, ಬೋಪಾಲ್, ಭುವನೇಶ್ವರ, ಚಂಡೀಗಢ, ಡೆಹ್ರಾಡೂನ್, ಹೈದಾರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವೆದೆಹಲಿ, ರಾಯ್ಪುರ, ರಾಂಚಿ, ಶಿಮ್ಲಾ, ಶ್ರೀನಗರದಲ್ಲಿ ಬ್ಯಾಂಕ್ ಬಂದ್

ನವೆಂಬರ್ 11: ಕನಕದಾಸ ಜಯಂತಿ, ವಾಂಗಾಲ ಹಬ್ಬ, ಬ್ಯಾಂಕ್ ಬೆಂಗಳೂರು, ಇಂಫಾಲ್, ಶಿಲ್ಲಾಂಗ್‌ನಲ್ಲಿ ಬಂದ್

ನವೆಂಬರ್ 12: ಎರಡನೇ ಶನಿವಾರ, ದೇಶಾದಾದ್ಯಂತ ಬ್ಯಾಂಕ್ ಬಂದ್

ನವೆಂಬರ್ 13: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್

ನವೆಂಬರ್ 20: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್

ನವೆಂಬರ್ 23: ಸೆಂಗ್ ಕುಂಟ್ಸ್‌ನೆಮ್, ಶಿಲಾಂಗ್‌ನಲ್ಲಿ ಎಲ್ಲ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ.

ನವೆಂಬರ್ 26: ನಾಲ್ಕನೇ ಶನಿವಾರ, ದೇಶಾದಾದ್ಯಂತ ಬ್ಯಾಂಕ್ ಬಂದ್

ನವೆಂಬರ್ 27: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್ ಆಗಿರಲಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ( ಆರ್ ಬಿಐ ) ನವೆಂಬರ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಮಾರ್ಗಸೂಚಿಯ ಅನ್ವಯ, ಬ್ಯಾಂಕುಗಳು ರಾಜ್ಯವನ್ನು ಅವಲಂಬಿಸಿ ಎಲ್ಲಾ ಸಾರ್ವಜನಿಕ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ ರಜಾದಿನಗಳನ್ನು ಹೊಂದಿದೆ.

ಪ್ರಾದೇಶಿಕ ರಜಾದಿನಗಳನ್ನು ಸಂಬಂಧಪಟ್ಟ ಆಯಾ ರಾಜ್ಯದ ಸರ್ಕಾರವು ನಿರ್ಧರಿಸುತ್ತದೆ.

ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್

ನವೆಂಬರ್ 1: ಮಂಗಳವಾರ, ಕನ್ನಡ ರಾಜ್ಯೋತ್ಸವ

ನವೆಂಬರ್ 6: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್

ನವೆಂಬರ್ 11: ಶುಕ್ರವಾರ, ಕನಕದಾಸ ಜಯಂತಿ

ನವೆಂಬರ್ 12: ಎರಡನೇ ಶನಿವಾರ, ದೇಶಾದಾದ್ಯಂತ ಬ್ಯಾಂಕ್ ಬಂದ್

ನವೆಂಬರ್ 13: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್

ನವೆಂಬರ್ 20: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್

ನವೆಂಬರ್ 26: ನಾಲ್ಕನೇ ಶನಿವಾರ, ದೇಶಾದಾದ್ಯಂತ ಬ್ಯಾಂಕ್ ಬಂದ್

ನವೆಂಬರ್ 27: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್

ಮೇಲೆ ತಿಳಿಸಿದ ದಿನಗಳಂದು ಬ್ಯಾಂಕ್ ರಜೆ ಇರಲಿದ್ದು, ಗ್ರಾಹಕರು ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದಿದ್ದರೆ ಅನ್ಯಥಾ ಓಡಾಡುವುದು ತಪ್ಪುತ್ತದೆ

You may also like

Leave a Comment