Adhar Card: ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ಭಾರತೀಯನ ಗುರುತಿನ ಚೀಟಿ ಇದ್ದಂತೆ. ಸರ್ಕಾರದ ಯಾವುದೇ ಪ್ರಯೋಜನವನ್ನು ಪಡೆಯಲು ಈ ಆಧಾರ್ ಕಾರ್ಡ್(Adhar card) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
ನಾವು ಸರ್ಕಾರದ ಕೆಲಸಕ್ಕಾಗಿ ಹೋದಾಗ, ಏನಾದರೂ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹೋದಾಗ ಅಥವಾ ಬೇರೇನಾದರೂ ಕೆಲಸಗಳಿಗೆ ಹೋದಾಗ ಕೆಲವೊಮ್ಮೆ ಆಧಾರ್ ಕಾರ್ಡ್ ಬೇಕಾಗುತ್ತದೆ. ಆದರೆ ಒಮ್ಮೊಮ್ಮೆ ನಾವು ಆಧಾರ್ ಕಾರ್ಡ್ ಮನೆಯಲ್ಲೇ ಮರೆತು ಹೋಗಿರುತ್ತೇವೆ. ಇದರ ಹೊರತಾಗಿ ಆಧಾರ್ ಕಾರ್ಡ್ ಕಳೆದುಹೋದ ಸಂದರ್ಭಗಳೂ ಇರುತ್ತವೆ. ಇಂತಹ ಸಂದರ್ಭದಲ್ಲಿ ನಿಂತಲ್ಲೇ ನೀವು ವಾಟ್ಸಾಪ್ ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹದು.
ಹೌದು, ಸಾಮಾನ್ಯವಾಗಿ ಜನರು ತಮ್ಮ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು UIDAI ವೆಬ್‌ಸೈಟ್‌ಗೆ ಭೇಟಿ ನೀಡುತ್ತಾರೆ ಅಥವಾ mAadhaar ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಆದರೆ ಇನ್ನು ಮುಂದೆ ನೀವು ವಾಟ್ಸಪ್ ಮುಖಾಂತರ ಡೌನ್ಲೋಡ್ ಮಾಡಬಹುದು. ಹೇಗೆಂದು ತಿಳಿಯೋಣ ಬನ್ನಿ.
ವಾಟ್ಸಪ್ ನಲ್ಲಿ ಆಧಾರ್ ಡೌನ್ಲೋಡ್ ಮಾಡುವ ವಿಧಾನ:
ಹಂತ 1: ವಾಟ್ಸ್ಆ್ಯಪ್ನಿಂದ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು, ಮೊದಲು +91-9013151515 ಮೊಬೈಲ್ ಸಂಖ್ಯೆಯನ್ನು ಫೋನ್‌ನಲ್ಲಿ ಸೇವ್ ಮಾಡಿ. ಆ ಸಂಖ್ಯೆಯನ್ನು ನಿಮ್ಮ ವಾಟ್ಸ್ಆ್ಯಪ್ನಲ್ಲಿ ತೆರೆಯಿರಿ.
ಹಂತ 2: ಸಂಖ್ಯೆಯನ್ನು ತೆರೆದ ನಂತರ, ವಾಟ್ಸ್ಆ್ಯಪ್ಚಾಟ್ಗೆ ಹೋಗಿ ಹಾಯ್ ಅಂತ ಮೆಸೇಜ್ ಕಳಿಸಿ.
ಹಂತ 3: ನೀವು ಚಾಟ್‌ಬಾಟ್‌ನಿಂದ ಪ್ರತಿಕ್ರಿಯೆಯನ್ನು ಪಡೆಯುತ್ತೀರಿ, ಅದರಲ್ಲಿ ನೀವು ಹಲವು ಆಯ್ಕೆಗಳನ್ನು ನೋಡುತ್ತೀರಿ.
ಹಂತ 4: ಆ ಆಯ್ಕೆಗಳಿಂದ, ನೀವು ಡಿಜಿಲಾಕರ್ ಸೇವೆಗಳನ್ನು ಆಯ್ಕೆ ಮಾಡಬೇಕು.
ಹಂತ 5: ನೀವು ಡಿಜಿಲಾಕರ್‌ನಲ್ಲಿ ನಿಮ್ಮ ಖಾತೆಯನ್ನು ರಚಿಸಿರುವುದರಿಂದ, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ.
ಹಂತ 6: ನಿಮ್ಮ ಸಂಖ್ಯೆಗೆ OTP ಬರುತ್ತದೆ, ಅದನ್ನು ಚಾಟ್‌ನಲ್ಲಿ ಟೈಪ್ ಮಾಡಿ.
ಹಂತ 7: ಇದು ಪರಿಶೀಲನಾ ಪ್ರಕ್ರಿಯೆಯಾಗಿದ್ದು, ಪೂರ್ಣಗೊಂಡ ನಂತರ ಡಿಜಿಲಾಕರ್‌ನಲ್ಲಿರುವ ಎಲ್ಲಾ ದಾಖಲೆಗಳನ್ನು ನಿಮಗೆ ತೋರಿಸಲಾಗುತ್ತದೆ.
ಹಂತ 8: ಪಟ್ಟಿಯಿಂದ ಆಧಾರ್ ಆಯ್ಕೆಮಾಡಿ. ನಿಮ್ಮ ಆಧಾರ್ ಕಾರ್ಡ್ ಸ್ವಲ್ಪ ಸಮಯದ ನಂತರ ವಾಟ್ಸ್ಆ್ಯಪ್ನಲ್ಲಿ ಕಾಣಿಸಿಕೊಳ್ಳುತ್ತದೆ.
