Home » OBC Reservation: ಹೆತ್ತವರ ಆದಾಯ ಮಿತಿ 8 ಲಕ್ಷ ದಾಟಿದರೆ ಇಲ್ಲ ಒಬಿಸಿ ಮೀಸಲಾತಿ – ಹೈಕೋರ್ಟ್ ಮಹತ್ವದ ತೀರ್ಪು

OBC Reservation: ಹೆತ್ತವರ ಆದಾಯ ಮಿತಿ 8 ಲಕ್ಷ ದಾಟಿದರೆ ಇಲ್ಲ ಒಬಿಸಿ ಮೀಸಲಾತಿ – ಹೈಕೋರ್ಟ್ ಮಹತ್ವದ ತೀರ್ಪು

0 comments
Karnataka Highcourt

OBC Reservation: ಹಿಂದುಳಿದ ವರ್ಗ 2ಎ ಅಡಿಯಲ್ಲಿ ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿ ದಾಟಿದ್ದರೆ ಅಭ್ಯರ್ಥಿಯು ಮೀಸಲಾತಿ ಪತ್ರ ಪಡೆಯಲು ಅನರ್ಹರಾಗುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹೌದು, ‘ಪ್ರವರ್ಗ 2-ಎ (ಹಿಂದುಳಿದ ವರ್ಗ) ಅಡಿಯಲ್ಲಿ ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿಯನ್ನು ದಾಟಿದ್ದರೆ ಅಭ್ಯರ್ಥಿಯು ಕೆನೆ ಪದರ ವ್ಯಾಪ್ತಿಗೆ ಒಳಪಡುತ್ತಾರೆ. ಹಾಗಾಗಿ, ಅವರು ಮೀಸಲಾತಿ ಪತ್ರ ಪಡೆಯಲು ಅನರ್ಹರಾಗುತ್ತಾರೆ’ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹುದ್ದೆಗೆ ಪ್ರವರ್ಗ 2ಎ (ಕುರುಬ ಜಾತಿ) ಅಡಿ ಆಯ್ಕೆಯಾಗಿದ್ದ ರಾಘವೇಂದ್ರ ಚಂದ್ರಣ್ಣನವರ್ ಎಂಬುವರಿಗೆ ಮೀಸಲಾತಿಗೆ ಅನ್ವಯಿಸುವ ಜಾತಿ ಸಿಂಧುತ್ವ ಪ್ರಮಾಣಪತ್ರ ವಿತರಿಸುವಂತೆ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸರಕಾರ ಮೇಲ್ಮನವಿ ಸಲ್ಲಿಸಿತ್ತು. ಮತ್ತೊಂದೆಡೆ, ಏಕಸದಸ್ಯ ಪೀಠದ ಆದೇಶ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ‌ನಿಂದನೆ ಆರೋಪದಡಿ ಕ್ರಮ ಜರುಗಿಸುವಂತೆ ಕೋರಿ ರಾಘವೇಂದ್ರ ಅವರು ನ್ಯಾಯಾಂಗ ‌ನಿಂದನೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾ. ವಿಭು ಭಖ್ರು ಮತ್ತು ನ್ಯಾ. ಸಿ.ಎಂ.ಪೂಣಚ್ಚ ಅವರನ್ನು ಒಳಗೊಂಡ ನ್ಯಾಯಪೀಠವು, ಅಭ್ಯರ್ಥಿಯ ಪೋಷಕರ ಸಂಬಳ ಸೇರಿದಂತೆ ಎಲ್ಲ ಮೂಲದ ಆದಾಯವನ್ನು ಪರಿಗಣಿಸಬೇಕು. ಒಂದು ವೇಳೆ ಆದಾಯವು ನಿಗದಿತ ಮಿತಿಯನ್ನು ದಾಟಿದರೆ, ಕೆನೆ ಪದರ ನಿಯಮ ಅನ್ವಯ ಆಗಲಿದ್ದು ಅಭ್ಯರ್ಥಿಯು ಪ್ರವರ್ಗ 2-ಎಯಡಿ ಮೀಸಲಾತಿಯನ್ನು ಕ್ಲೈಮ್‌ ಮಾಡಲು ಅವಕಾಶವಿಲ್ಲ ಎಂದು ತೀರ್ಪಿತ್ತಿದೆ.

You may also like