Home » ಅ.31 ರವರೆಗೆ ಮಡಿಕೇರಿ -ಸಂಪಾಜೆ ,ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲಿ ಅಧಿಕ ತೂಕದ ಸರಕು ವಾಹನಗಳ ಸಂಚಾರ ನಿಷೇಧ

ಅ.31 ರವರೆಗೆ ಮಡಿಕೇರಿ -ಸಂಪಾಜೆ ,ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲಿ ಅಧಿಕ ತೂಕದ ಸರಕು ವಾಹನಗಳ ಸಂಚಾರ ನಿಷೇಧ

by Praveen Chennavara
0 comments

ಮಡಿಕೇರಿ-ಚೆಟ್ಟಳ್ಳಿ ಮತ್ತು ಮಡಿಕೇರಿ-ಸಂಪಾಜೆ ರಸ್ತೆಗಳಲ್ಲಿ, 16,200 ಕೆ.ಜಿ.ಗೂ ಅಧಿಕ ನೋಂದಣಿ ತೂಕದ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ಅ.31ರವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಡೆಯುತ್ತಿದ್ದು, ದುರಸ್ತಿ ಕಾರ್ಯ ಮುಕ್ತಾಯಗೊಳಿಸಲು ಕಾಲಾವಕಾಶ ಬೇಕಿರುವುದರಿಂದ ಭಾರೀ ವಾಹನಗಳ ನಿಷೇಧಾಜ್ಞೆಯನ್ನು ಮುಂದುವರೆಸುವಂತೆ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಅಭಿಯಂತರರು ಕೋರಿರುವ ಹಿನ್ನೆಲೆಯಲ್ಲಿ ಈ ಹಿಂದೆ ನೀಡಲಾಗಿದ್ದ ಆದೇಶವನ್ನು ಅ.31ರವರೆಗೆ ವಿಸ್ತರಿಸಿ ಆದೇಶಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

You may also like

Leave a Comment