Home » Crime News: ಹುಬ್ಬಳ್ಳಿಯಲ್ಲಿದ್ದಾನೆ ವಿಚಿತ್ರವಾದ ಸಲಿಂಗಕಾಮಿ – ಮುಗ್ಧ ಮಕ್ಕಳೇ ಇವನ ಟಾರ್ಗೆಟ್

Crime News: ಹುಬ್ಬಳ್ಳಿಯಲ್ಲಿದ್ದಾನೆ ವಿಚಿತ್ರವಾದ ಸಲಿಂಗಕಾಮಿ – ಮುಗ್ಧ ಮಕ್ಕಳೇ ಇವನ ಟಾರ್ಗೆಟ್

1 comment
Crime News

Hubballi: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು(Crime News)ವರದಿಯಾಗುತ್ತಲೇ ಇರುತ್ತವೆ. ಅಪ್ರಾಪ್ತ ಮಕ್ಕಳಿಗೆ ಹಣದಾಸೆ ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ವಿಕೃತ ಕಾಮಿಯನ್ನು ಸ್ತಳೀಯರೇ ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಹುಬ್ಬಳ್ಳಿಯಲ್ಲಿ (Hubballi)ನಡೆದಿದೆ.

ಹುಬ್ಬಳ್ಳಿಯ ಸಿದ್ಧಲಿಂಗೇಶ್ವರ ಕಾಲೋನಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಆರೋಪಿ ಹುಬ್ಬಳ್ಳಿಯ ಪ್ರತಿಷ್ಠಿತ ಹೋಟೆಲ್ಲೊಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದನಂತೆ. ಆರೋಪಿ ಒಡಿಶಾ ಮೂಲದವನು ಎನ್ನಲಾಗಿದ್ದು, ಸುತ್ತಮುತ್ತಲಿನ ಮನೆಗಳ ಅಪ್ರಾಪ್ತ ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಆ ಮಕ್ಕಳಿಗೆ ಹಣದ ಆಸೆ, ಚಾಕಲೆಟ್ ಆಸೆ ತೋರಿಸಿ ಅಪ್ರಾಪ್ತ ಬಾಲಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದನಂತೆ. ಇದು ಸಾಲದೆಂಬಂತೆ ತಾನೇ ಅದರ ವಿಡಿಯೋ ಮಾಡಿಕೊಂಡು ಹಣಕ್ಕಾಗಿ ಸೆಕ್ಸ್ ಸೈಟ್ಗಳಿಗೆ ವಿಡಿಯೋ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಇದೇ ರೀತಿ, ಅಪ್ರಾಪ್ತ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಸಂದರ್ಭ ಸ್ಥಳೀಯರಿಗೆ ರೆಡ್ ಹ್ಯಾಂಡ್ ಆಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಇದೇ ವೇಳೆ, ಸ್ಥಳೀಯರು ಆರೋಪಿಗೆ ಹಿಗ್ಗಾಮುಗ್ಗ ಥಳಿಸಿದ್ದು, ನಂತರ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆ ಮಾಡಿ ಆರೋಪಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: ಬೆಳ್ಳಾರೆ ಸಮೀಪದ ಶೇಣಿಯಲ್ಲಿ ವಿಷಕಾರಿ ಹಣ್ಣಿನ ಜ್ಯೂಸ್ ಸೇವಿಸಿದ ತಂದೆ-ಮಗಳು ,ಮಗಳು ಮೃತ್ಯು

You may also like

Leave a Comment