Home » Odisha train accident: ಒಡಿಶಾದ ರೈಲು ದುರಂತ : ಸುಳ್ಳು ಹೇಳಿ ಪರಿಹಾರ ಪಡೆಯಲು ಮುಂದಾಗ ಖತರ್ನಾಕ್‌ ಮಹಿಳೆ..!

Odisha train accident: ಒಡಿಶಾದ ರೈಲು ದುರಂತ : ಸುಳ್ಳು ಹೇಳಿ ಪರಿಹಾರ ಪಡೆಯಲು ಮುಂದಾಗ ಖತರ್ನಾಕ್‌ ಮಹಿಳೆ..!

0 comments
Odisha train accident

Odisha train accident: ಒಡಿಶಾದ ರೈಲು ದುರಂತದಲ್ಲಿ ತನ್ನ ಪತಿ ಮೃತಪಟ್ಟಿದ್ದಾರೆಂದು ಸುಳ್ಳು ಹೇಳಿ ಪರಿಹಾರ ಪಡೆಯೋದಕ್ಕೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಒಡಿಶಾದ ರೈಲು ಅಪಘಾತ (Odisha train accident) ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದು, ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದಾರೆ. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಅಲ್ಲದೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯನ್ನು ಸರ್ಕಾರವೇ ಭರಿಸುತ್ತಿದೆ ಎಂದು ವರದಿಯಾಗಿದೆ.

ರೈಲು ದುರಂತದಲ್ಲಿ ಮೃತರ ಕುಟುಂಬಕ್ಕೆ ರೈಲ್ವೇ ಇಲಾಖೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ 2 ಲಕ್ಷ ರೂಪಾಯಿ ಘೋಷಿಸಿದರೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 5 ಲಕ್ಷ ರೂಪಾಯಿ ಪರಿಹಾರದಂತೆ ಒಟ್ಟು 17 ಲಕ್ಷ ರೂಪಾಯಿ ಸಿಗಲಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಮಹಿಳೆಯೊಬ್ಬಳು ರೈಲು ದುರಂತದಲ್ಲೇ ತನ್ನ ಪತಿ ಬಿಜಯ್ ದತ್ತಮೃತ ಪಟ್ಟಿದ್ದಾರೆಂದು ರೈಲ್ವೇ ಇಲಾಖೆ, ಪ್ರಧಾನಿ ಕಾರ್ಯಾಲಯ ಹಾಗೂ ಸಿಎಂ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅಲ್ಲದೇ ಆಕೆ ಪತಿಯ ಮೃತದೇಹವೂ ಪತ್ತೆಯಾಗಿದೆ, ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಅರ್ಜಿಯನ್ನು ಗಂಭೀರವಾಗಿ ಪರಿಶೀಲನೆ ನಡೆಸಿದಾಗ 17 ಲಕ್ಷ ಪರಿಹಾರದ ಆಸೆಗಾಗಿ ಸುಳ್ಳು ಪತಿ ಮೃತಪಟ್ಟಿದ್ದಾರೆಂದು ಹೇಳಿರುವುದು ಬೆಳಕಿಗೆ ಬಂದಿದೆ.

 

ಇದನ್ನು ಓದಿ: Tractor accident: ಬೆಂಗಳೂರಲ್ಲಿ ಘೋರ ದುರಂತ: ವಾಟರ್ ಟ್ರ್ಯಾಕ್ಟರ್ ಹರಿದು 4 ವರ್ಷದ ಬಾಲಕ ಬಲಿ 

You may also like

Leave a Comment