Home » Breaking News: ತಿಮರೋಡಿ ನೇತೃತ್ವದ ಸೆ. 3 ರ ಬೃಹತ್ ಸಭೆಗೆ ಬರಲಿರುವ ಒಕ್ಕಲಿಗ ಸಮುದಾಯದ ಸ್ವಾಮೀಜಿ, ಆದಿಚುಂಚನಗಿರಿ ಒಕ್ಕಲಿಗ ಸ್ವಾಮೀಜಿಯಿಂದ ಆಶೀರ್ವಾದ

Breaking News: ತಿಮರೋಡಿ ನೇತೃತ್ವದ ಸೆ. 3 ರ ಬೃಹತ್ ಸಭೆಗೆ ಬರಲಿರುವ ಒಕ್ಕಲಿಗ ಸಮುದಾಯದ ಸ್ವಾಮೀಜಿ, ಆದಿಚುಂಚನಗಿರಿ ಒಕ್ಕಲಿಗ ಸ್ವಾಮೀಜಿಯಿಂದ ಆಶೀರ್ವಾದ

by ಹೊಸಕನ್ನಡ
0 comments

ಸೌಜನ್ಯ ಅತ್ಯಾಚಾರ ಹತ್ಯಾ ಪ್ರಕರಣದ ಹೋರಾಟಕ್ಕೆ ಸೆಪ್ಟೆಂಬರ್ 3ರಂದು ಭಾನುವಾರ ಬೆಳ್ತಂಗಡಿಯಲ್ಲಿ ಉದ್ದೇಶಿಸಲಾಗಿರುವ ಬೃಹತ್ ಜನ ಸಮ್ಮೇಳನಕ್ಕೆ ಎಲ್ಲಾ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇದೀಗ ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದ್ದು ಒಕ್ಕಲಿಗ ಸಮಾಜದ ಮಂಗಳೂರಿನ ಕಾವೂರು ಮಠದ ಸ್ವಾಮೀಜಿ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬೆಳ್ತಂಗಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಜನಪರ ಸಂಘಟನೆಗಳ ಮಹಾ ಸಭೆಗೆ ಭಾಗವಹಿಸಲಿದ್ದಾರೆ.

ಜಗದ್ಗುರು ಆದಿಚುಂಚನಗಿರಿಯ ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿಯವರ ಸ್ಪಷ್ಟ ನಿರ್ದೇಶನದ ಮೇರೆಗೆ ಮಂಗಳೂರಿನ ಕಾವೂರು ಮಠದ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಬರುವ ಭಾನುವಾರ ಬೆಳ್ತಂಗಡಿಯಲ್ಲಿ ನಡೆಯಲಿರುವ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಜನಪರ ಸಂಘಟನೆಗಳ ಮಹಾಸಭೆಗೆ ಭಾಗವಹಿಸಲಿದ್ದಾರೆ.

ದಿನದಿಂದ ದಿನಕ್ಕೆ ಭಾನುವಾರ ನಡೆಯುವ ಮಹಾ ಸಮ್ಮೇಳನಕ್ಕೆ ದೊಡ್ಡಮಟ್ಟದ ಬೆಂಬಲ ಹರಿದು ಬರುತ್ತಿರುವ ಸಂದರ್ಭದಲ್ಲಿ ಕರಾವಳಿಯ ಬಹು ಸಂಖ್ಯಾತ ಒಕ್ಕಲಿಗ ಸಮಾಜದ ಸ್ವಾಮೀಜಿ ಶ್ರೀ ಡಾಕ್ಟರ್ ಧರ್ಮಪಾಲನಾಥ ಸ್ವಾಮೀಜಿಯವರು ಬೆಳ್ತಂಗಡಿಗೆ ಆಗಮಿಸುತ್ತಿರುವ ಮೂಲಕ ಸೌಜನ್ಯ ಕುಟುಂಬಕ್ಕೆ ಮತ್ತು ಹೋರಾಟಗಾರರಿಗೆ ಮತ್ತೊಂದಷ್ಟು ಬಲ ಸಿಕ್ಕಂತಾಗಿದೆ.

You may also like

Leave a Comment