Home » T Narasipura: ಸಚಿವರ ಬಾಡೂಟ ಸವಿಯಲು ನೂಕುನುಗ್ಗಲು: ಮೂಳೆ ಕಡಿಯಲು ಬಂದ ವೃದ್ದೆ ಕಾಲಿನ ಮೂಳೆಗೆ ಬಂತು ಕುತ್ತು

T Narasipura: ಸಚಿವರ ಬಾಡೂಟ ಸವಿಯಲು ನೂಕುನುಗ್ಗಲು: ಮೂಳೆ ಕಡಿಯಲು ಬಂದ ವೃದ್ದೆ ಕಾಲಿನ ಮೂಳೆಗೆ ಬಂತು ಕುತ್ತು

by ಹೊಸಕನ್ನಡ
0 comments
T Narasipura

T Narasipura: ಶಾಸಕರ ಕೃತಜ್ಞತಾ ಸಮಾರಂಭದ ಸಂದರ್ಭ ಭರ್ಜರಿ ಬಾಡೂಟ ಸವಿಯಲು ತೆರಳಿದ್ದ ವೇಳೆ ನೂಕು-ನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ವೃದ್ದೆಯೊಬ್ಬಳ ಕಾಲು ಮೂಳೆ ಮುರಿದಿರುವ ಘಟನೆ ಟಿ.ನರಸಿಪುರದಲ್ಲಿ ನಡೆದಿದೆ. ಬಾಡೂಟದಲ್ಲಿ ಮೂಳೆ ಕಡಿಯಲು ಸವಿಯಲು ಬಂದ ವೃದ್ದೆ ಕಾಲಿನ ಮೂಳೆ. ಮುರಿದುಕೊಂಡಿದ್ದಾಳೆ.

ಸಮಾಜ ಕಲ್ಯಾಣ ಸಚಿವರಾಗಿರುವ ಎಚ್.ಸಿ. ಮಹದೇವಪ್ಪ ಅವರು ಬಾಡೂಟ ಆಯೋಜಿಸಿದ್ದರು. ತಿ.ನರಸೀಪುರ (T Narasipura) ತಾಲೂಕಿನ ಹೆಳವರ ಹುಂಡಿ ಸಮೀಪ ಸುಮಾರು 10,000 ಹೆಚ್ಚು ಮಂದಿಗೆ ಬಾಡೂಟ ಆಯೋಜನೆ ಮಾಡಲಾಗಿತ್ತು. ಅಲ್ಲಿ ಬಾಡೂಟಕ್ಕೆ ಓಟು ಕೊಟ್ಟವರು ವೋಟು ಕೊಡದವರು ಎಲ್ಲರೂ ಗುಂಪು ಗುಂಪಾಗಿ ಬಂದಿದ್ದಾರೆ. ಅಲ್ಲಿಗೆ ಅಜ್ಜಿ ಒಬ್ಬಳು ಕೂಡ ಬಾಟೂಡ ಸವಿಯಲು ಬಂದಿದ್ದಳು. ಹಾಗೆ ಬಂದ ಕಾರ್ಯಕರ್ತರಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಆಗ ಕೆಳಕ್ಕುರುಳಿದ 66 ವರ್ಷದ ಚಿಕ್ಕಮುತ್ತಮ್ಮ ಎಂಬ ವೃದ್ದೆ ಕಾಲ್ತುಳಿತಕ್ಕೆ ಸಿಲುಕಿದ್ದಾರೆ.

ಹಾಗೆ ಕಾಲ್ತುಳಿತಕ್ಕೆ ಸಿಲುಕಿದ ಚಿಕ್ಕಮುತ್ತಮ್ಮಳ ಬಲಗಾಲ ಮೂಳೆ ಮುರಿದಿದೆ. ಅಲ್ಲಿಯೇ ಇದ್ದ ಯುವಕರು ಚಿಕ್ಕ ಮುತ್ತಮ್ಮನವರ ರಕ್ಷಣೆ ಮಾಡಿ ನಂತರ ಅಂಬುಲೆನ್ಸ್‌ಗೆ ಕರೆ ಮಾಡಲಾಗಿದೆ. ಆದರೆ ಟ್ರಾಫಿಕ್ ಜಾಮ್‌ನಿಂದಾಗಿ ಸಮಯಕ್ಕೆ ಅಂಬುಲೆನ್ಸ್ ಬರಲಾಗಲಿಲ್ಲ. ಅಂತಿಮವಾಗಿ ತಿರುಮಲಕೂಡು ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

 

ಇದನ್ನು ಓದಿ: Grihajyoti Yojana: ಗೃಹಜ್ಯೋತಿ ಮಾರ್ಗಸೂಚಿ ಪ್ರಕಟ: ಉಚಿತ ವಿದ್ಯುತ್ ಪಡೆಯಲು ಇರೋ ಕಂಡೀಷನ್ ಯಾವುವು ಗೊತ್ತಾ ? 

You may also like

Leave a Comment