Olympics 2024: ಜುಲೈ 26ರಂದು ಆರಂಭಗೊಂಡ 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕ್ರೀಡಾ ಹಬ್ಬ ಭಾನುವಾರ (ನಿನ್ನೆ) ಅದ್ಧೂರಿಯಾಗಿ ತೆರೆಕಂಡಿದೆ. ಕಳೆದ ಜುಲೈ 26ರಂದು ಪ್ಯಾರಿಸ್‌ನ (Paris) ಸೆನ್ ನದಿ ದಡದಲ್ಲಿ ಅದ್ಧೂರಿಯಾಗಿ ಆರಂಭವಾಗಿದ್ದ ಕ್ರೀಡಾಕೂಟಕ್ಕೆ ಸ್ಟೇಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ತೆರೆ ಎಳೆಯಲಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚು ಸೇರಿದಂತೆ 126 ಪದಕಗಳೊಂದಿಗೆ ಯುನೈಟೆಡ್ ಸ್ಟೇಟ್ಸ್ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೀನಾ ತನ್ನ ಒಲಿಂಪಿಕ್ ಅಭಿಯಾನವನ್ನು 40 ಚಿನ್ನದ ಪದಕಗಳೊಂದಿಗೆ ಒಟ್ಟು 91 ಪದಕಗಳೊಂದಿಗೆ ಕೊನೆಗೊಳಿಸಿತು. ಒಲಿಂಪಿಕ್ಸ್‌ನುದ್ದಕ್ಕೂ ಅಮೆರಿಕ ಮತ್ತು ಚೀನಾದಂತಹ ಎರಡು ಕ್ರೀಡಾ ಮಹಾಶಕ್ತಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತೆಯೇ ಭಾರತ ತಂಡವು ಒಂದು ಬೆಳ್ಳಿ ಮತ್ತು ಐದು ಕಂಚಿನೊಂದಿಗೆ 71ನೇ ಸ್ಥಾನದಲ್ಲಿದೆ. ಆದರೆ ಈ ಒಲಂಪಿಕ್ಸ್ ನಲ್ಲಿ ಯಾವ ಪದಕ ಗೆಲ್ಲದೆಯೂ ಕೆಲವು ಭಾರತೀಯ ಕ್ರೀಡಾಪಟುಗಳು ಕಂಡು ಕೇಳರಿಯದ ಸಾಧನೆ ಮಾಡಿದ್ದಾರೆ. ಅವರ ಸಾಧನೆಯ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ.
ಪದಕ ಗೆಲ್ಲದಿದ್ದರೂ ಆರ್ಚರಿಯಲ್ಲಿ ವಿಶ್ವಾಸ:
ಮಿಶ್ರ ತಂಡ ವಿಭಾಗದಲ್ಲಿ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ನಾಲ್ಕನೇ ಸ್ಥಾನ ಪಡೆದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಆರ್ಚ ಪಟು ಭಾರತಕ್ಕೆ ಅತ್ಯುತ್ತಮ ಫಲಿತಾಂಶ ತಂದುಕೊಟ್ಟರು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮೆರಿಕದ ಬ್ರಾಡಿ ಎಲಿಸನ್ ಮತ್ತು ಕೇಸಿ ಕೌಫೊಲ್ಡ್ ವಿರುದ್ಧ ಬೊಮ್ಮದೇವರ ಮತ್ತು ಭಕತ್ 6-2 ಅಂತರದಲ್ಲಿ ಸೋತರು. ಇದೇ ಮೊದಲ ಬಾರಿಗೆ ಭಾರತೀಯ ಆರ್ಚರಿ ತಂಡ ಒಲಿಂಪಿಕ್ಸ್ನ ಸೆಮಿಫೈನಲ್ಗೆ ಏರಿದ್ದರು.
ಪದಕ ಗೆಲ್ಲದಿದ್ದರೂ ಉತ್ತಮ ಸಾಧನೆ ಮಾಡಿದ ಲಕ್ಷ್ಯ:
ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಸೇನ್ ಪಾತ್ರರಾಗಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಸ್ಪರ್ಧಿಸಿದ ಅವರು ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸುವ ಮೂಲಕ ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದು 16ರ ಸುತ್ತಿನಲ್ಲಿ ಸಹ ಆಟಗಾರ ಎಚ್.ಎಸ್.ಪ್ರಣಯ್ ಅವರನ್ನು ಸೋಲಿಸಿದರು ಮತ್ತು ನಂತರ ಕ್ವಾರ್ಟರ್ ಫೈನಲ್ನಲ್ಲಿ ಚೌ ಟಿಯೆನ್-ಚೆನ್ ಅವರನ್ನೂ ಮಣಿಸಿದ್ದರು. ಸೆಮಿಫೈನಲ್ನಲ್ಲಿ ಚಾಂಪಿಯನ್ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಸೋತ ಅವರು ಕಂಚಿನ ಪದಕದ ಪಂದ್ಯದಲ್ಲಿ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ಸೋಲು ಕಂಡರು.
ಮಣಿಕಾ ಭಾತ್ರಾಗೆ ಜಸ್ಟ್ ಮಿಸ್:
ಮಣಿಕಾ ಬಾತ್ರಾ ಟೇಬಲ್ ಟೆನಿಸ್ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 18 ನೇ ಶ್ರೇಯಾಂಕದ ಮಣಿಕಾ 64ನೇ ಸುತ್ತಿನಲ್ಲಿ ವಿಶ್ವದ 103ನೇ ಶ್ರೇಯಾಂಕಿತ ಆಟಗಾರ್ತಿ ಗ್ರೇಟ್ ಬ್ರಿಟನ್ನ ಅನ್ನಾ ಹರ್ಸಿ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸುವ ಮೂಲಕ ಅವರು ತಮ್ಮ ಅಭಿಯಾನ ಆರಂಭಿಸಿದ್ದರು. ಅವರು 32 ನೇ ಸುತ್ತಿನಲ್ಲಿ ಫ್ರಾನ್ಸ್ ನ ಪೃಥ್ವಿಕಾ ಪವಾಡೆ ಅವರನ್ನು ಸೋಲಿಸಿದರು. ಪ್ರಿ ಕ್ವಾರ್ಟರ್ ಫೈನಲ್ನಲ್ಲಿ 8ನೇ ಶ್ರೇಯಾಂಕದ ಜಪಾನಿನ ಮಿಯು ಹಿರಾನೊ ವಿರುದ್ಧ 4-1 ಅಂತರದಿಂದ ಸೋತ ಮಣಿಕಾ ಅವರ ಅಭಿಯಾನ ಕೊನೆಗೊಂಡಿತು.
ಭಾರತೀಯರಿಗೆ ಒಲಿದ 6 ಪದಕ:
* ಆ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮನು ಭಾಕರ್ ಭಾರತಕ್ಕೆ 2ನೇ ಕಂಚಿನ ಪದಕ ತಂದುಕೊಟ್ಟರು.
* ಮೂರನೇ ಪದಕ ಒಲಿದು ಬಂದಿದ್ದು ಕೂಡ ಶೂಟಿಂಗ್ನಲ್ಲೇ ಎಂಬುದು ವಿಶೇಷ. 50 ಮೀ ರೈಫಲ್ ಶೂಟಿಂಗ್ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಸ್ವಪ್ನಿಲ್ ಕುಸಾಲೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
* ನಾಲ್ಕನೇ ಪದಕ ಮೂಡಿಬಂದಿರುವುದು ಪುರುಷರ ಹಾಕಿ ಆಟದಿಂದ.
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಬಾರಿ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
* ಭಾರತಕ್ಕೆ ಆರನೇ ಪದಕ ಗೆದ್ದುಕೊಡುವಲ್ಲಿ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಯಶಸ್ವಿಯಾದರು
