Hasana: ಶಿವಮೊಗ್ಗದ ಆಯನೂರಿನಲ್ಲಿ ಒಂದೂವರೆ ತಿಂಗಳ ಬಾಣಂತಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಬಾಣಂತನಕ್ಕೆಂದು ಹಾಸನದಿಂದ ಶಿವಮೊಗ್ಗದ ಆಯನೂರಿಗೆ ಹರ್ಷಿತಾ (22) ಎಂಬ ಮಹಿಳೆ ಹೋಗಿದ್ದರು. ಆದರೆ ತವರು ಮನೆಯಲ್ಲೇ ಹರ್ಷಿತಾಗೆ ಹೃದಯಾಘಾತ ಉಂಟಾಗಿದೆ.
ಹಾಸನದ ಕೊಮ್ಮೆನಹಳ್ಳಿಯ ಹರ್ಷಿತಾ ಶಿವಮೊಗ್ಗದ ಆಯನೂರು ಗ್ರಾಮದಲ್ಲಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಮೊನ್ನೆ ರಾತ್ರಿ ಹರ್ಷಿತಾಗೆ ಎದೆನೋವು ಕಾಣಿಸಿಕೊಂಡಿದ್ದು ಹಾಸನದ ಕೊಮ್ಮೇನಹಳ್ಳಿಯಲ್ಲಿರುವ ತಮ್ಮ ಪತಿಗೆ ಕರೆ ಮಾಡಿ ಬರಲು ಹೇಳಿದ್ದಾರೆ. ಬೆಳಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆಂಬುಲೆನ್ಸ್‌ನಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೂರುವರೆ ವರ್ಷದ ಹಿಂದೆ ಮದುವೆಯಾಗಿದ್ದ ಹರ್ಷಿತಾ, ಎರಡನೇ ಮಗು ಬಾಣಂತಕ್ಕೆಂದು ಹೋಗಿದ್ದಾಗ ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. ಮುದ್ದಾದ ಒಂದು ತಿಂಗಳ ಮಗು ಈಗ ತಾಯಿ ಇಲ್ಲದ ತಬ್ಬಲಿಯಾಗಿದೆ. ಇನ್ನು ಹರ್ಷಿತಾ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಖಚಿತವಾಗಿಲ್ಲ ಎಂದು ಡಿಎಚ್‌ಒ ಡಾ.ನಟರಾಜ್ ಹೇಳಿದ್ದಾರೆ.
ಇದನ್ನೂ ಓದಿ: Bangalore: ರಾಜಕಾರಣಿಗಳ ಜೊತೆ ಮಲಗು ಎಂದು ಹಿಂಸೆ ಕೊಡುವ ಗಂಡ, ಪೊಲೀಸರ ಮೊರೆ ಹೋದ ಮಹಿಳೆ
