Home » RBI: ಇನ್ಮುಂದೆ UPI ವಹಿವಾಟಿಗೆ ಶುಲ್ಕ? ಬಿಗ್ ಅಪ್ಡೇಟ್ ಕೊಟ್ಟ RBI ಗವರ್ನರ್

RBI: ಇನ್ಮುಂದೆ UPI ವಹಿವಾಟಿಗೆ ಶುಲ್ಕ? ಬಿಗ್ ಅಪ್ಡೇಟ್ ಕೊಟ್ಟ RBI ಗವರ್ನರ್

0 comments

 

RBI: ಮುಂದಿನ ದಿನಗಳಲ್ಲಿ ಯುಪಿಐ ವಹಿವಾಟಿಗೆ ಶುಲ್ಕಗಳನ್ನು ವಹಿಸಲಾಗುವುದು ಎಂಬ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಈ ಕುರಿತು ಆರ್ ಬಿ ಐ ಗವರ್ನರ್ ಬಿಗ್ ಅಪ್ಡೇಟ್ ಕೊಟ್ಟಿದ್ದು ಈ ರೀತಿಯ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

 

ಹೌದು, ಯುಪಿಐ ಬಳಸಿ ಮಾಡುವ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಪ್ರಸ್ತಾವ ಇದೆಯೇ ಎಂಬ ಪ್ರಶ್ನೆಯನ್ನು ಗವರ್ನರ್ ಎದುರು, ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ನಂತರ ಬುಧವಾರ ಇರಿಸಲಾಗಿತ್ತು. ಇದಕ್ಕೆ ಯುಪಿಐ ಆಧಾರಿತ ಪಾವತಿಗಳಿಗೆ ಯಾವುದೇ ಬಗೆಯ ಶುಲ್ಕ ವಿಧಿಸುವ ಪ್ರಸ್ತಾವ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

 

ಮೊಬೈಲ್‌ ಫೋನ್‌ಗಳನ್ನು ದೂರದಿಂದಲೇ ಲಾಕ್ ಮಾಡುವ ಸೌಲಭ್ಯಕ್ಕೆ ಅನುಮತಿ ನೀಡುವುದರ ಒಳಿತು, ಕೆಡುಕುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ ರಾವ್ ತಿಳಿಸಿದ್ದಾರೆ.

You may also like