Online scam: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬಂದ ಜಾಹಿರಾತು ನಂಬಿ ಆನ್ಲೈನ್ ಆಯಪ್ ಮೂಲಕ ಚೂಡಿದಾರ್ ಬುಕ್ ಮಾಡಿದ ಮಹಿಳೆ ಸೈಬರ್ ವಂಚಕರಿಂದ 87 ಸಾವಿರ ಕಳೆದುಕೊಂಡ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸ್ ದೂರಿನ ಪ್ರಕಾರ 35 ವರ್ಷ ವಯಸ್ಸಿನ ಮಹಿಳೆ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನೋಡಿ Aramya App ಮೂಲಕ ದಿನಾಂಕ 03-01-2026 ರಂದು ಸಾಲ್ವಾರ್ ಚೂಡಿದಾರ್ ಬಟ್ಟೆಯನ್ನು ಬುಕ್ ಮಾಡಿ ಪಾವತಿ ಮಾಡಿರುತ್ತಾರೆ.
ನಂತರ ದಿನಾಂಕ 05-01-2026 ಮತ್ತು 06-01-2026 ರಂದು ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಕರೆ/ವಾಟ್ಸ್‌ಆಪ್ ಮಾಡಿ, ಪಾವತಿ stuck ಆಗಿದೆ ಎಂದು ಹೇಳಿ ಸ್ಕ್ಯಾನರ್, Refund Code ಮತ್ತು ಬ್ಯಾಂಕ್ ಖಾತೆ ಮೂಲಕ ಮರು ಹಣ ಪಾವತಿಸಿಸಿಕೊಂಡಿರುತ್ತಾರೆ.
ಈ ರೀತಿಯಾಗಿ ಪಿರ್ಯಾಧಿಯು ಒಟ್ಟು ರೂ.87,524/- ಹಣವನ್ನು ಸೈಬರ್ ವಂಚನೆ ಮೂಲಕ ಕಳೆದುಕೊಂಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ ನಂ: 06/2026 ಕಲಂ: 318(4), 318(2), 319(2) BNS 2023 ಮತ್ತು 66(ಸಿ) 66 (ಡಿ) ಐಟಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ
