Chaitra Kundapura:ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ (Chaitra Kundapura) ಅವರ ತಂದೆ ಮಾಡಿರುವ ಆರೋಪಗಳಿಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿದ್ದಾರೆ.
ಕನ್ನಡ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ವಿರುದ್ಧ ತಮ್ಮ ತಂದೆ ಮಾಡಿರುವ ಆರೋಪಕ್ಕೆ ಸ್ಪಷ್ಟತೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಸ್ಟೇಟಸ್ ಹಾಕಿಕೊಂಡಿದ್ದಾರೆ. ಚೈತ್ರ ಮದುವೆ ನಾನು ಒಪ್ಪಲ್ಲ. ಅವಳು ಮದುವೆಗೆ ಕರೆದಿಲ್ಲ. ಮೋಸ ಮಾಡಿದ್ದಾಳೆ. ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದೆಲ್ಲ ಮಾಡಿರುವ ತಂದೆಯ ಆರೋಪಕ್ಕೆ ಉತ್ತರ ನೀಡಿರುವ ಚೈತ್ರಾ ಕುಂದಾಪುರ ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.
ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂಥ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. “ಎರಡು ಕ್ವಾಟರ್ ಕೊಟ್ಟರೆ ನನ್ನ ಮಕ್ಕಳು ದೇವರು” ಹೀಗೆನ್ನುವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ! ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಸ್ಟೇಟಸ್ ಹಾಕಿರುವ ಚೈತ್ರಾ ಕುಂದಾಪುರ “ಹೆತ್ತ ಮಕ್ಕಳನ್ನ ಸಾಕಲಿಲ್ಲ. ಫೀಸು ಕಟ್ಟಿ ಓದಿಸಲಿಲ್ಲ, ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ…. ಕಟ್ಟಿಕೊಂಡ ಹೆಂಡತಿದೆ ಹೊಡೆದು ಚಿತ್ರ ಹಿಂದೆ ಮಾಡಿದ್ದು ಬಿಟ್ರೆ ಬೇರೆ ಏನೂ ಇಲ್ಲಾ…. ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು. ವಾವ್… ಎಂದು ಬರೆದುಕೊಂಡಿದ್ದಾರೆ.
