Home » ಮಹಿಳೆ ಒಪ್ಪಿಗೆ ಮಾತ್ರ ಮುಖ್ಯ: ಪತಿ ಒಪ್ಪಿಗೆ ಇಲ್ಲದೆ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್‌

ಮಹಿಳೆ ಒಪ್ಪಿಗೆ ಮಾತ್ರ ಮುಖ್ಯ: ಪತಿ ಒಪ್ಪಿಗೆ ಇಲ್ಲದೆ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್‌

0 comments
Getting Pregnant

ನವದೆಹಲಿ: ಗರ್ಭಪಾತಕ್ಕೆ ಮಹಿಳೆಯ ಇಚ್ಛೆ, ಒಪ್ಪಿಗೆ ಮಾತ್ರ ಮುಖ್ಯವಾದಿದ ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಹೇಳಿದೆ.

ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಯೊಬ್ಬರಿಗೆ ಅನುಮತಿಯನ್ನು ಕೋರ್ಟ್‌ ನೀಡಿದೆ. ತನ್ನ 16 ವಾರಗಳ ಗರ್ಭ ತೆಗೆಸಲು ಅನುಮತಿ ನೀಡುವಂತೆ ಕೋರಿ ಪಂಜಾಬ್‌ನ 21 ವರ್ಷದ ಮಹಿಳೆ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್‌ ಈ ತೀರ್ಪು ನೀಡಿದೆ.

ತಾನು 2025ರ ಮೇ 2 ರಂದು ಮದುವೆಯಾಗಿದ್ದು ಪತಿಯೊಂದಿಗೆ ತನ್ನ ಸಂಬಂಧ ಉತ್ತಮವಾಗಿರಲಿಲ್ಲ. ಎಂದು ಅರ್ಜಿದಾರ ಮಹಿಳೆ ತಿಳಿಸಿದ್ದಾರೆ. ಹಿಂದಿನ ವಿಚಾರಣೆಯಲ್ಲಿ ಮಹಿಳೆಯ ತಪಾಸಣೆ ನಡೆಸಲು ವೈದ್ಯಕೀಯ ಮಂಡಳಿ ರಚಿಸುವಂತೆ ಸ್ನಾತಕೋತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಕೋರ್ಟ್ ನಿರ್ದೇಶನ ನೀಡಿತ್ತು ಗರ್ಭಪಾತಕ್ಕೆ ಒಳಗಾಗಲು ಮಹಿಳೆಯ ಸಮರ್ಥರಿದ್ದಾರೆ ಎಂದು ವೈದ್ಯಕೀಯ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಇಚ್ಛೆ ಮತ್ತು ಒಪ್ಪಿಗೆಯಷ್ಟೇ ಗರ್ಭಪಾತಕ್ಕೆ ಮುಖ್ಯವೆಂದು ಅಭಿಪ್ರಾಯಪಟ್ಟ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಪತಿ ಒಪ್ಪಿಗೆ ಇಲ್ಲದೆ ಗರ್ಭಪಾತ ನಡೆಸಲು ಮಹಿಳೆಗೆ ಅನುಮತಿ ನೀಡಿದೆ.

You may also like