Home » Elephant Camp: ಗುಂಡ್ಯದಲ್ಲಿ ಆನೆ ಶಿಬಿರ ಸ್ಥಾಪನೆಗೆ ವಿರೋಧ – ಉಗ್ರ ಹೋರಾಟಕ್ಕೆ ನಿರ್ಧಾರ – ಜು.30ರಂದು ಸಮಾಲೋಚನಾ ಸಭೆ

Elephant Camp: ಗುಂಡ್ಯದಲ್ಲಿ ಆನೆ ಶಿಬಿರ ಸ್ಥಾಪನೆಗೆ ವಿರೋಧ – ಉಗ್ರ ಹೋರಾಟಕ್ಕೆ ನಿರ್ಧಾರ – ಜು.30ರಂದು ಸಮಾಲೋಚನಾ ಸಭೆ

0 comments

Elephant Camp: ರೈತರ ಕೃಷಿ ರಕ್ಷಣೆ ಫ್ಲೋಟಿಂಗ್ ಆಗದ ಜಾಗವನ್ನು ಫ್ಲೋಟಿಂಗ್ ಮಾಡುವುದರ ಬಗ್ಗೆ, ಜಾನುವಾರುಗಳನ್ನು ಕಾಡಿಗೆ ಮೇಯಿಸುವಂತಿಲ್ಲ ಎಂದು ಅರಣ್ಯ ಮಂತ್ರಿ ಈಶ್ವರ ಖಂಡೆ ಅವರಿಂದ ಬಂದ ನಿಷೇಧದ ಬಗ್ಗೆ ಹಾಗೂ ಇನ್ನು ಗಂಭೀರವಾದ ವಿಷಯ ಎಂದರೆ ಗುಂಡ್ಯದಲ್ಲಿ ಆನೆ ಶಿಬಿರ ಸ್ಥಾಪನೆ.ಇದರಿಂದ ಆಸು ಪಾಸಿನ ಗ್ರಾಮದ ರೈತರ ಭೂಮಿ ಕಳೆದುಕೊಳ್ಳುವ ಭೀತಿ. ಈ ರೀತಿ ರೈತರನ್ನು ಪ್ರಕೃತಿ ಇಂದ ಆಗುವ ತೊಂದರೆಯ ಮಾನಸಿಕ ಒತ್ತಡ ಜೊತೆಗೆ ಅರಣ್ಯ ಇಲಾಖೆಯ ಕಾನೂನಿಂದ ಆಗುವ ಮಾನಸಿಕ ಹಿಂಸೆಯಿಂದ ರೈತರನ್ನು ಪಾರು ಮಾಡಲು ಮಲೆನಾಡು ಜನ ಹಿತರಕ್ಷಣಾ ವೇದಿಕೆ ರೈತರ ಪರವಾಗಿ ಉಗ್ರವಾಗಿ ಹೋರಾಟ ಮಾಡಲು ನಿರ್ಧರಿಸಿದೆ.

ಇದೇ ಬರುವ ತಾರೀಕು.30.07.2025 ನೆಯ ಬುಧವಾರ ಬೆಳಿಗ್ಗೆ 11 ಗಂಟೆಗೆ ಸಮಯಕ್ಕೆ ಸರಿಯಾಗಿ ಸ್ಥಳ ಕುಕ್ಕೆ ಸುಬ್ರಹ್ಮಣ್ಯದ ಐನೆಕೀದು ಸೊಸೈಟಿ ಬಳಿ ರೈತರ ಸಂರಕ್ಷಣೆ ಕಾಡು ಪ್ರಾಣಿಗಳ ದಾಳಿಯಿಂದ ರೈತರ ಜೀವ ಉಳಿಸುವ ಕುರಿತು ಸಭೆ ನಡೆಸಲು ನಿರ್ಧರಿಸಲಾಗಿದೆ.

ವಿವಿಧ ಧಾರ್ಮಿಕ ಪ್ರಮುಖರು, ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಊರಿನ ಗಣ್ಯರು ತಾವುಗಳು ಬಂದು ರೈತರ ಉಳಿವಿಗಾಗಿ ಮತ್ತು ಗ್ರಾಮೀಣ ಪ್ರದೇಶದ ಜನರ ಸಂರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರನ್ನು ಜಾಗೃತಗೊಳಿಸಿ ಉಗ್ರವಾಗಿ ಹೋರಾಟ ಮಾಡಲು ತಾವುಗಳು ಬಂದು ಸಲಹೆ ಸೂಚನೆ ನೀಡಬೇಕೆಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ವಿನಂತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: SSLC Mark: SSLC ಪಾಸಿಂಗ್ ಪರ್ಸಂಟೆಜ್ ಕಡಿತ ವಿಚಾರ – ಇನ್ಮೇಲೆ ಒಟ್ಟು 206 ಮಾರ್ಕ್ ಸಿಕ್ರೆ ಪಾಸ್

You may also like