Home » Optical Illusion : ಓದುಗರೇ ನಿಮಗೊಂದು ಚಾಲೆಂಜ್, ಒಣಎಲೆಗಳು ಉದುರಿರುವ ಪ್ರದೇಶದಲ್ಲಿ ಅಡಗಿ ಕೂತಿರೋ ನಾಯಿಯನ್ನು ಪತ್ತೆ ಹಚ್ಚಬಲ್ಲಿರಾ?

Optical Illusion : ಓದುಗರೇ ನಿಮಗೊಂದು ಚಾಲೆಂಜ್, ಒಣಎಲೆಗಳು ಉದುರಿರುವ ಪ್ರದೇಶದಲ್ಲಿ ಅಡಗಿ ಕೂತಿರೋ ನಾಯಿಯನ್ನು ಪತ್ತೆ ಹಚ್ಚಬಲ್ಲಿರಾ?

0 comments
Optical Illusion Photo

Optical Illusion Photo : ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ.

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು (Optical Illusion Photo) ಹೆಚ್ಚಾಗಿ ವೈರಲ್ ಆಗುತ್ತಿದ್ದು, ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಮರಗಳಿಂದ ಕೂಡಿದ ಒಣಗಿದ ಎಲೆಗಳು ಉದುರಿರುವ ಪ್ರದೇಶದಲ್ಲಿ ಅಡಗಿ ಕೂತಿರೋ ನಾಯಿಯನ್ನು ಪತ್ತೆ ಹಚ್ಚುವುದು.

ಸದ್ಯ ವೈರಲ್​​​ ಆಗಿರುವ ಫೋಟೋದ ಒಂದು ಭಾಗದಲ್ಲಿ ಒಂದು ನಾಯಿ ಇದೆ. ಎಲೆಗಳ ಬಣ್ಣ ಮತ್ತು ನಾಯಿಯ ಬಣ್ಣಕ್ಕೂ ಸಾಮ್ಯತೆ ಇದೆ. ಒಂದನ್ನೊಂದು ಬೆರೆತು ಹೋಗಿದ್ದು, ಶ್ವಾನ ಅಷ್ಟು ಸುಲಭವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಶ್ವಾನ ಎಲ್ಲಿದೆ ಎಂದು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರುವಾಗಿದೆ.

10 ಸೆಕೆಂಡ್​ ಸಮಯದಲ್ಲಿ ಹುಡುಕಾಟ ನಡೆಸಿದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ, ಹುಡುಕಿ ಸಾಕಾಗಿ ಚಾಲೆಂಜ್ ಅಲ್ಲಿ ಸೋತ್ರೀ ಅಂತ ಒಪ್ಪಿಕೊಂಡೋರು ಮಾತ್ರ ಈ ಕೆಳಗಿನ ಚಿತ್ರ ನೋಡಿ. ಒಂದು ವೇಳೆ ನೀವು ಮೊದಲೇ ಪತ್ತೆ ಹಚ್ಚಿದ್ರಿ ಎಂದಿದ್ರೆ ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದೆ ಎಂದು ಭಾವಿಸಿಕೊಳ್ಳಿ. ಇನ್ನೂ ಗುರುತಿಸಲು ಆಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿರುವವರು ಈ ಕೆಳಗಿನ ಚಿತ್ರವನ್ನು ನೋಡಿ ಉತ್ತರ ಪಡೆದುಕೊಳ್ಳಿ. ಮಾರ್ಕ್ ಮಾಡಿದ ಜಾಗ ಗಮನಿಸಿದ ಮೇಲೆ ನಿಮಗೆ ಹುಡುಕುತ್ತಿರುವ ಚಿತ್ರವು ಸ್ಪಷ್ಟವಾಗಿ ಕಾಣುತ್ತದೆ.

You may also like

Leave a Comment