Home » UGC: ಯುದ್ಧ ಭೀತಿ ಹಿನ್ನಲೆಯಲ್ಲಿ ವಿವಿ ಪರೀಕ್ಷೆಗಳು ರದ್ದು ಆದೇಶ: ನಕಲಿ ಆದೇಶದ ಕುರಿತು ಯುಜಿಸಿ ಸ್ಪಷ್ಟನೆ!

UGC: ಯುದ್ಧ ಭೀತಿ ಹಿನ್ನಲೆಯಲ್ಲಿ ವಿವಿ ಪರೀಕ್ಷೆಗಳು ರದ್ದು ಆದೇಶ: ನಕಲಿ ಆದೇಶದ ಕುರಿತು ಯುಜಿಸಿ ಸ್ಪಷ್ಟನೆ!

0 comments

UGC: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿಯಿಂದಾಗಿ ಭಾರತದಾದ್ಯಂತ ಎಲ್ಲಾ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೋಟಿಸ್ ನಕಲಿ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ಸ್ಪಷ್ಟಪಡಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ನೋಟಿಸ್‌ ನಕಲಿಯಾಗಿದ್ದು ಇದು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕುತಂತ್ರವಾಗಿದೆ. ಕೆಲವರು ವಿದ್ಯಾರ್ಥಿಗಳನ್ನು ಬಲವಂತವಾಗಿ ಮನೆಗೆ ಕಳಿಸುತ್ತಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದಂತೆ ಯುಜಿಸಿ ಮನವಿ ಮಾಡಿದೆ.

You may also like