Home » Pakistan : ನಮ್ಮ ಪ್ರಧಾನಿ ಪುಕ್ಕುಲ, ಮೋದಿ ಹೆಸರು ಹೇಳುವ ಧೈರ್ಯ ಕೂಡ ಇಲ್ಲ – ಪಾಕ್ ಸಂಸದ ಲೇವಡಿ

Pakistan : ನಮ್ಮ ಪ್ರಧಾನಿ ಪುಕ್ಕುಲ, ಮೋದಿ ಹೆಸರು ಹೇಳುವ ಧೈರ್ಯ ಕೂಡ ಇಲ್ಲ – ಪಾಕ್ ಸಂಸದ ಲೇವಡಿ

0 comments

Pakistan : ಭಾರತದ ದಾಳಿಯಿಂದ ತತ್ತರಿಸಿರುವ ಪಾಕಿಸ್ತಾನ ಈ ದಾಳಿಯನ್ನು ಖಂಡಿಸಲು ವಿಶೇಷ ಸಂಸತ್ ಅಧಿವೇಶನವನ್ನು ಕರೆದಿತ್ತು. ಈ ವೇಳೆ ಪಾಕ್ ಸಂಸದರು ಒಬ್ಬರು ಪಾಕಿಸ್ತಾನದ ಪ್ರಧಾನಿಯ ಮರ್ಯಾದೆಯನ್ನು ತೆಗೆದಿದ್ದಾರೆ.

ಹೌದು, ಪಾಕಿಸ್ತಾನದ ಪ್ರಧಾನಿ ಕರೆದ ವಿಶೇಷ ಸಂಸತ್ ಅಧಿವೇಶನದಲ್ಲಿ ಪಾಕಿಸ್ತಾನದ ಸಂಸದರು ಆಡಿರುವ ಮಾತುಗಳು ಪಾಕ್‌ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಶುಕ್ರವಾರ ಪಾಕಿಸ್ತಾನದ ಸಂಸದ, ಪಾಕಿಸ್ತಾನದ ಅಸೆಂಬ್ಲಿಯಲ್ಲಿಯೇ ತಮ್ಮ ದೇಶದ ಪ್ರಧಾನಿ ಹೇಡಿ ಎಂದು ಬಹಿರಂಗವಾಗಿ ವಾಗ್ದಳಿ ಮಾಡಿದ್ದಾರೆ. ಕನಿಷ್ಠ ಭಾರತದ ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು ಹೇಳುವ ಧೈರ್ಯ ಕೂಡ ತೋರಿಲ್ಲ. ಭಾರತದ ದಾಳಿಯನ್ನು ತಡೆಯಲು ನಮ್ಮ ಸೈನ್ಯ ವಿಫಲವಾಗಿದೆ. ಪಾಕಿಸ್ತಾನದ ಸೇನೆಯ ಮನೋಬಲವೇ ಕುಗ್ಗಿಹೋಗಿದೆ ಎಂದು ಹೇಳಿದ್ದಾರೆ.

You may also like