Home » Bengaluru : ಹೋಟೆಲ್ ಬೋರ್ಡ್ ನಲ್ಲಿ ಕನ್ನಡಿಗರನ್ನು ಕೆಟ್ಟದಾಗಿ ನಿಂದಿಸಿದ ಓನರ್ !!

Bengaluru : ಹೋಟೆಲ್ ಬೋರ್ಡ್ ನಲ್ಲಿ ಕನ್ನಡಿಗರನ್ನು ಕೆಟ್ಟದಾಗಿ ನಿಂದಿಸಿದ ಓನರ್ !!

0 comments

Bengaluru : ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಭಾರತದ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಮಾಡಲಾಗಿದೆ. ಆದರೆ ಇದೀಗ ಈ ಬೆನ್ನಲ್ಲೇ ಮತ್ತೊಂದು ಕನ್ನಡಿಗರಿಗೆ ಅಪಮಾನ ಮಾಡಿದಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಒಬ್ಬ ನಾಲಾಯಕ್ ಹೋಟೆಲ್ ಓನರ್, ತನ್ನ ಹೋಟೆಲ್ ಬೋರ್ಡ್ ನಲ್ಲಿ ಕನ್ನಡಿಗರನ್ನು ಕೆಟ್ಟದಾಗಿ ನಿಂದಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ಬೆಂಗಳೂರಿನ ಕೋರಮಂಗಲದಲ್ಲಿನ ಹೊಟೇಲ್‌ ಜಿಎಸ್‌ ಸೂಟ್ಸ್‌ನ ಎಲ್‌ಇಡಿ ಡಿಸ್‌ಪ್ಲೇನಲ್ಲಿ ಕನ್ನಡಿಗರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಿನ್ನೆ ( ಮೇ 16 ) ಈ ಘಟನೆ ನಡೆದಿದ್ದು, ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಈ ಸುದ್ದಿ ತಿಳಿದ ಕೂಡಲೇ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

ಬೋರ್ಡ್ ಮೇಲೆ “KANNAGIDA M***” ಎಂದು ಬರೆಯಲಾಗಿದ್ದು, ಇದು ಅತಿರೇಕದ ವರ್ತನೆಯಂತೆ ಕಂಡಿದೆ. ಡಿಸ್‌ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯ ಪದಗಳಿಂದ ಅವಹೇಳನ ಮಾಡಲಾಗಿದೆ. ನಿನ್ನೆ ರಾತ್ರಿ ಈ ಬರಹ ಕಂಡುಬಂದಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಈ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಟೆಲ್ ನಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೋರ್ಡ್​ನಲ್ಲಿ ಬೇಕಂತಲೇ ಈ ರೀತಿ ಬರೆದು ಹಾಕಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.

You may also like