Home » Vittla: ವಿಟ್ಲ: ಅಪ್ರಾಪ್ತನಿಗೆ ಬೈಕ್‌ ನೀಡಿದ ಮಾಲಕನಿಗೆ 32,000 ರೂ. ದಂಡ

Vittla: ವಿಟ್ಲ: ಅಪ್ರಾಪ್ತನಿಗೆ ಬೈಕ್‌ ನೀಡಿದ ಮಾಲಕನಿಗೆ 32,000 ರೂ. ದಂಡ

by ಹೊಸಕನ್ನಡ
0 comments
Traffic Rules

 

Vittla: ಕಾನೂನು ಉಲ್ಲಂಘಿಸಿ ಅಪ್ರಾಪ್ತ ಬಾಲಕನ ಕೈಗೆ ದ್ವಿಚಕ್ರ ವಾಹನ ನೀಡಿದಕ್ಕೆ ವಿಟ್ಲದ ವಾಹನ ಮಾಲಕರೊಬ್ಬರಿಗೆ ಬಂಟ್ವಾಳ ನ್ಯಾಯಾಲಯ 32 ಸಾವಿರ ರೂಪಾಯಿಗಳ ಭಾರಿ ದಂಡ ವಿಧಿಸಿ ತೀರ್ಪು ನೀಡಿದೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವಿಟ್ಲ (Vittla) ಸಮೀಪ, ಪುತ್ತೂರಿನಿಂದ ವಿಟ್ಲದ ಕಡೆ ಬರುತ್ತಿದ್ದ ದ್ವಿಚಕ್ರ ವಾಹನವೊಂದಕ್ಕೆ. ಓರ್ವ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಇನ್ನೊಂದು ಬೈಕ್‌ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಎರಡೂ ವಾಹನಗಳ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅಪಘಾತಕ್ಕೆ ಕಾರಣ ಅಪ್ರಾಪ್ತ ಬಾಲಕ ವಾಹನ ಚಲಾಯಿಸಿದ್ದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಬಂಟ್ವಾಳದ ಎಸಿಜೆ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ, ಬಾಲಕ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಮಾಲಕ ಮುಹಮ್ಮದ್ ಅನೀಸ್ ಎಂಬುವರಿಗೆ 32,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡುವುದು ಕಾನೂನು ಪ್ರಕಾರ ಅಪರಾಧ ಎಂಬುದನ್ನು ನ್ಯಾಯಾಲಯ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

You may also like