Home » Oyo: ಪ್ರೇಮಿಗಳಿಗೆ ಬಿಗ್‌ ಗುಡ್‌ ನ್ಯೂಸ್ ಕೊಟ್ಟ ಓಯೋ – ಇನ್ನು ರಾತ್ರಿ ಇಷ್ಟು ಗಂಟೆ ಜಾಲಿ ಜಾಲಿ!!

Oyo: ಪ್ರೇಮಿಗಳಿಗೆ ಬಿಗ್‌ ಗುಡ್‌ ನ್ಯೂಸ್ ಕೊಟ್ಟ ಓಯೋ – ಇನ್ನು ರಾತ್ರಿ ಇಷ್ಟು ಗಂಟೆ ಜಾಲಿ ಜಾಲಿ!!

0 comments

Oyo: ಇತ್ತೀಚಿಗೆ ಓಯೋ ಸಂಸ್ಥೆ ತನ್ನ ನಿಯಮದಲ್ಲಿ ಮಹತ್ವದ ಬದಲಾವಣೆ ತಂದಿದ್ದು ಇನ್ನು ಮುಂದೆ ಮದುವೆಯಾಗದ ದಂಪತಿಗಳಿಗೆ ಪ್ರವೇಶವಿಲ್ಲ ಎಂಬುದನ್ನು ತಿಳಿಸಿತ್ತು. ಇದೀಗ ಈ ಬೆನ್ನಲ್ಲೇ ಪ್ರೇಮಿಗಳಿಗೆ ಓಯೋ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಹೌದು, ದೇಶದ ಹಲವೆಡೆ ಓಯೋಗೆ ಅವಿವಾತರಿಗೆ ಎಂಟ್ರಿಯನ್ನು ನಿಷೇಧಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಪ್ರೇಮಿಗಳಿಗೆ ಓಯೋ ಗುಡ್‌ ನ್ಯೂಸ್‌ ಕೊಟ್ಟಿದೆ. ಅದೇನೆಂದರೆ ಈಗ ಓಯೋ ಕೊಠಡಿಗಳನ್ನು ಹೋಟೆಲ್ ಕೊಠಡಿಗಳು ಎಂದು ಕರೆಯಲಾಗುತ್ತದೆ. ಈ ಕೊಠಡಿಗಳು ಭಾರತದಲ್ಲಿ ಅಲ್ಲದೆ, ವಿದೇಶಗಳಲ್ಲೂ ಸೇವೆ ನೀಡುತ್ತಿವೆ. ವಯಸ್ಕರಿಂದ ಯುವಕರವರೆಗೂ ಅನೇಕ ಜನರು ಓಯೋ ಕೊಠಡಿಗಳನ್ನು ಬಳಕೆ ಮಾಡುತ್ತಾರೆ. ದೂರದ ಊರುಗಳಿಂದ ಬಂದಂತಹವರಿಗೆ ಕಡಿಮೆ ದರದಲ್ಲಿ ಉಳಿದುಕೊಳ್ಳಲು ಇದು ತುಂಬಾ ಸಹಾಯಕವಾಗುತ್ತಿದೆ.

ಮತ್ತೊಂದೆಡೆ ನೋಡೋದಾದ್ರೆ, ಪ್ರೇಮಿಗಳು ಕೂಡ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವೆರಡು ದೃಷ್ಟಿಯಲ್ಲೂ ನೋಡದೇ ಬಹುತೇಕ ಮಂದಿ ಓಯೋ ಎಂದರೆ ಬರೀ ಪ್ರೇಮಿಗಳಷ್ಟೇ ಉಳಿದುಕೊಳ್ಳುವ ತಾಣ ಅಂದುಕೊಂಡುಬಿಡುತ್ತಾರೆ. ಅನೇಕ ಉದ್ಯಮಿಗಳು ಓಯೋ ಕೊಠಡಿಗಳಲ್ಲಿ ಒಪ್ಪಂದಗಳನ್ನ ಕೂಡ ಮಾಡುತ್ತಿದ್ದಾರೆ. ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದ ಜನರು ತಮ್ಮ ಕೆಲಸ ಮುಗಿಯುವವರೆಗೂ ತಂಗಲು ಓಯೋ ಕೊಠಡಿಗಳನ್ನು ಕಾಯ್ದಿರಿಸಬಹುದಾಗಿದೆ.

You may also like