Mangaluru: ಮಂಗಳೂರಿನ ಜೈಲ್ ಕಂಪೌಂಡ್ ಒಳಗೆ ಪ್ಲಾಸ್ಟಿಕ್ ಕವರ್‌ನಲ್ಲಿ ವಸ್ತುವೊಂದನ್ನು ಇಬ್ಬರು ಯುವಕರು ಬೈಕ್ ಮೂಲಕ ಬಂದು ಬಿಸಾಡುವ ದೃಶ್ಯವೊಂದು ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್ ಕಾರ್‌ನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ವೈರಲ್ ಆಗಿದೆ. ಯುವಕರು ಗಾಂಜಾ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ನಂಬರ್‌ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಬಂದ ಯುವಕರು ಮಂಗಳೂರಿನ ಜೈಲ್ ಕಂಪೌಂಡ್ ಒಳಗೆ ವಸ್ತುವೊಂದನ್ನು ಎಸೆದು ಅದೇ ಗಾಡಿಯಲ್ಲಿ ಪರಾರಿಯಾಗಿದ್ದಾರೆ.
ದ್ವಿಚಕ್ರ ವಾಹನ ಸವಾರರನ್ನು ಕವಿತಾ ಸನಿಲ್ ಅವರು ಚೇಸ್ ಮಾಡಿದ್ದಾರೆ. ಆದರೆ ಯುವಕರು ತಪ್ಪಿಸಿಕೊಂಡು ಹೋಗಿದ್ದಾರೆ. ಈ ಕುರಿತು ಜೈಲ್ ಅಧಿಕಾರಿ ಚಹಾ ಹುಡಿ ಬಿಸಾಡಿರಬಹುದು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಜೈಲಾಧಿಕಾರಿ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ಗೊಂಡಿದ್ದಾರೆ.
ಈ ಕುರಿತು ಸಿಸಿಟಿವಿಯಲ್ಲಿ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇನೆ ಎಂದು ಮಂಗಳೂರು ಕೇಂದ್ರ ಕಾರಾಗೃಹ ಬಂಧೀಖಾನೆ ಅಧಿಕಾರಿ ಅಸೈಖಾನ್ ಹೇಳಿದ್ದಾರೆ ಎಂದು ವರದಿಯಾಗಿದೆ.
