Home » Jammu Kashmir: ಪಹಲ್‌ಗಾಮ್‌ ದಾಳಿ ಪ್ರಕರಣ; ಶಂಕಿತ ಉಗ್ರರ ಮನೆ ಧ್ವಂಸ!

Jammu Kashmir: ಪಹಲ್‌ಗಾಮ್‌ ದಾಳಿ ಪ್ರಕರಣ; ಶಂಕಿತ ಉಗ್ರರ ಮನೆ ಧ್ವಂಸ!

0 comments

Jammu Kashmir: ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡದ ಬೆನ್ನಲ್ಲೇ ಪಹಲ್ಗಾಮ್‌ ದಾಳಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಇಬ್ಬರು ಉಗ್ರರ ನಿವಾಸವನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ.

ಪ್ರವಾಸಿಗರ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಇದರ ಹೊಣೆಯನ್ನು ಲಷ್ಕರ್‌-ಎ-ತೊಯ್ಬಾದ ಅಂಗ ಸಂಸ್ಥೆ ದಿ ರೆಸಿಸ್ಟೆನ್ಸ್‌ ಫ್ರಂಟ್‌ ಹೊತ್ತುಕೊಂಡಿದ್ದು, ಲಕ್ಷರ್‌ ಉಗ್ರ ಆದಿಲ್‌ ಪ್ರಮುಖ ಪಾತ್ರ ವಹಿಸಿದ್ದಾಗಿ ದೃಢಪಟ್ಟಿದೆ.

ಆದಿಲ್‌ ಮನೆಯನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಇದರ ಜೊತೆಗೆ ದಕ್ಷಿಣ ಕಾಶ್ಮೀರದಲ್ಲಿರುವ ಮತ್ತೋರ್ವ ಉಗ್ರ ಆಸಿಫ್‌ ಶೇಕ್‌ನ ಮನೆಯನ್ನು ಕೆಡವಿದೆ.

You may also like