Home » Pakistan : ಭಾರತದ ಗುಟುರಿಗೆ ನಡುಕ- ತನ್ನ ಪ್ರಜೆಗಳಿಗೆ ನೀರು ಮತ್ತು ಆಹಾರ ಮನೇಲಿ ತುಂಬಿಸಿ ಇಟ್ಕೊಳ್ಳಿ ಅಂದ ಪಾಕ್!!

Pakistan : ಭಾರತದ ಗುಟುರಿಗೆ ನಡುಕ- ತನ್ನ ಪ್ರಜೆಗಳಿಗೆ ನೀರು ಮತ್ತು ಆಹಾರ ಮನೇಲಿ ತುಂಬಿಸಿ ಇಟ್ಕೊಳ್ಳಿ ಅಂದ ಪಾಕ್!!

0 comments

Pakistan: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನಕ್ಕೆ ಭಾರತ ಸರ್ಕಾರವು ಒಂದಲ್ಲ ಒಂದು ರೀತಿಯ ಶಾಕ್ ನೀಡುತ್ತಲೇ ಬಂದಿದೆ. ಇದೀಗ ಪಾಕಿಸ್ತಾನಕ್ಕೂ ಭಾರತ ತನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂಬುದು ಒಂದು ಮಟ್ಟಿಗೆ ಅರ್ಥವಾದಂತೆ ಆಗಿದೆ. ಹೀಗಾಗಿ ಪಾಕಿಸ್ತಾನದ ಪ್ರಧಾನಿ ತನ್ನ ಪ್ರಜೆಗಳಿಗೆ ದೀರ್ಘಕಾಲದವರೆಗೆ ಆಹಾರ ಧಾನ್ಯಗಳನ್ನು ಸಂಗ್ರಹಿಸುವಂತೆ ಒತ್ತಾಯಿಸಿದ್ದಾರೆ.

ಹೌದು, ಭಾರತವು ತನ್ನ ಮೇಲೆ ಯುದ್ಧ ಮಾಡುವುದು ಸತ್ಯ ಎಂಬುದನ್ನು ಅರಿತುಕೊಂಡಿರುವ ಪಾಕಿಸ್ತಾನವು ಯುದ್ಧದ ಸಂದರ್ಭದಲ್ಲಿ ಅಲ್ಲಿನ ನಾಗರಿಕರ ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸದಂತೆ ಈಗಿನಿಂದಲೇ ತಯಾರಿ ನಡೆಸುತ್ತಿದೆ.

ಅಂದಹಾಗೆ ಭಾರತೀಯ ಸೇನೆಯ ದಾಳಿಯನ್ನು ತಪ್ಪಿಸಲು ಪಾಕಿಸ್ತಾನವು ಪ್ರತಿಯೊಂದು ಹಂತದಲ್ಲೂ ಸಿದ್ಧತೆಗಳನ್ನು ಆರಂಭಿಸಿದೆ. ಖೈಬರ್ ವಾಯುದಾಳಿ ಸೈರನ್‌ಗಳನ್ನು ಅಳವಡಿಸಿದ ನಂತರ ಮತ್ತು ಗಡಿ ಹಳ್ಳಿಗಳ ಸುತ್ತಲೂ ಬಂಕರ್‌ಗಳನ್ನು ನಿರ್ಮಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಇದೀಗ ಪಾಕಿಸ್ತಾನ ಸರ್ಕಾರವು ಪಿಒಕೆ ನಾಗರಿಕರನ್ನು ದೀರ್ಘಕಾಲದವರೆಗೆ ಆಹಾರ ಧಾನ್ಯಗಳನ್ನು ಸಂಗ್ರಹಿಸುವಂತೆ ಒತ್ತಾಯಿಸಿದೆ.

You may also like