Home » Love Story: ಮತ್ತೊಂದು ಗಡಿಯಾಚೆಗಿನ ಪ್ರೇಮಕಥೆ: 2 ಮಕ್ಕಳ ತಂದೆಯಾಗಿರುವ ಪ್ರಿಯಕರನ ಭೇಟಿಗೆ ಭಾರತಕ್ಕೆ ಓಡೋಡಿ ಬಂದ ಪಾಕಿಸ್ತಾನಿ ಯುವತಿ!

Love Story: ಮತ್ತೊಂದು ಗಡಿಯಾಚೆಗಿನ ಪ್ರೇಮಕಥೆ: 2 ಮಕ್ಕಳ ತಂದೆಯಾಗಿರುವ ಪ್ರಿಯಕರನ ಭೇಟಿಗೆ ಭಾರತಕ್ಕೆ ಓಡೋಡಿ ಬಂದ ಪಾಕಿಸ್ತಾನಿ ಯುವತಿ!

0 comments

Love Story: ಪಾಕಿಸ್ತಾನಕ್ಕೆ ಇಂಡಿಯಾ ಮೇಲೆ ಪ್ಯಾರ್ ಆಗೋಗಿದೆ. ಹೌದು, ಈಗಾಗಲೇ ವಿವಾಹವಾಗಿದ್ದು, ಇಬ್ಬರು ಮಕ್ಕಳಿರಿರುವ ತನ್ನ ಪ್ರಿಯಕರನನ್ನು ಭೇಟಿ ಮಾಡಲು 25 ವರ್ಷದ ಪಾಕಿಸ್ತಾನಿ ಮಹಿಳೆ ಭಾರತಕ್ಕೆ ಓಡೋಡಿ ಬಂದಿದ್ದಾಳೆ. ಆದರೆ ಆತನ ಪತ್ನಿ ತನ್ನ ಗಂಡನ ಪ್ರಿಯತಮೆ ಪಾಕಿಸ್ತಾನದಿಂದ ಬಂದಿರುವುದನ್ನು ತಿಳಿದು ಆಕೆಯ ಮೂಲದ ಬಗ್ಗೆ ಪತ್ತೆ ಮಾಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾಳೆ.

ಇದೀಗ ಪಾಕಿಸ್ತಾನಿ ಮಹಿಳೆ ಮೆಹ್ವಿಶ್ ಭಾರತದ ಗಡಿಯನ್ನು ದಾಟಿ, ತನ್ನ ವಿವಾಹಿತ ಪ್ರೇಮಿ ರೆಹಮಾನ್‌ನೊಂದಿಗೆ ಇರಲು ರಾಜಸ್ಥಾನದ ಬಿಕಾನೇರ್ ಜಿಲ್ಲೆಗೆ ಬಂದಿರುವುದು ವರದಿಯಾಗಿದೆ.

ಮೆಹ್ವಿಶ್ ಜುಲೈ 25 ರಂದು ತನ್ನ ಕುಟುಂಬದೊಂದಿಗೆ ಇಸ್ಲಾಮಾಬಾದ್‌ನಿಂದ ವಾಘಾ ಗಡಿಗೆ ಬಂದಿದ್ದು, ಆಕೆಯ ದಾಖಲೆಗಳನ್ನು ಪಾಕಿಸ್ತಾನ ಮತ್ತು ಭಾರತೀಯ ಅಧಿಕಾರಿಗಳು ಪರಿಶೀಲಿಸಿದ ನಂತರ, ಅವರು 45 ದಿನಗಳ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಪ್ರವೇಶಿಸಿದರು. ರೆಹಮಾನ್‌ನ ಮನೆಯವರು ಆಕೆಯನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಆದರೆ ರೆಹಮಾನ್‌ ಈಗಾಗಲೇ ಅಂದರೆ 2011ರಲ್ಲಿ ಭದ್ರಾ ಮೂಲದ ಫರೀದಾ ಎಂಬಾಕೆಯನ್ನು ವಿವಾಹವಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು, ಫರೀದಾ ಹಾಗೂ ಆಕೆಯ ಇಬ್ಬರು ಮಕ್ಕಳು ಪ್ರಸ್ತುತ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು.

ಇದೀಗ ತನ್ನ ಗಂಡನ ಪ್ರಿಯತಮೆ ಪಾಕಿಸ್ತಾನದಿಂದ ಬಂದಿರುವುದನ್ನು ತಿಳಿದು ಫರೀದಾ ಆಕೆಯ (Love Story) ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಮೆಹ್ವಿಶ್ ಗೂಢಚಾರಿಯಾಗಿರಬಹುದು ಎಂದು ಆರೋಪಿಸಿ ತನಿಖೆಗೆ ಒತ್ತಾಯಿಸಿದ್ದಾರೆ. ರೆಹಮಾನ್ ಕಾನೂನುಬದ್ಧವಾಗಿ ತನಗೆ ವಿಚ್ಛೇದನ ನೀಡಿಲ್ಲ ಮತ್ತು ಅವನ ಎರಡನೇ ಮದುವೆಯು ಅನಧಿಕೃತವಾಗಿದೆ ಎಂದು ಅವಳು ಹೇಳಿಕೊಂಡಿದ್ದಾಳೆ.

You may also like

Leave a Comment