Home » Pakistani arrest: ಉಲ್ಫಾ ಉಗ್ರ ಬಂಧನ ಬೆನ್ನಲ್ಲೇ ಪಾಕಿಸ್ತಾನ ಪ್ರಜೆ ಬಂಧನ: ರಾತ್ರೋರಾತ್ರಿ ಕಾರ್ಯಚರಣೆ ಮಾಡಿ ಬಂಧಿಸಿದ್ದಾದರು ಯಾಕೆ?

Pakistani arrest: ಉಲ್ಫಾ ಉಗ್ರ ಬಂಧನ ಬೆನ್ನಲ್ಲೇ ಪಾಕಿಸ್ತಾನ ಪ್ರಜೆ ಬಂಧನ: ರಾತ್ರೋರಾತ್ರಿ ಕಾರ್ಯಚರಣೆ ಮಾಡಿ ಬಂಧಿಸಿದ್ದಾದರು ಯಾಕೆ?

0 comments

Pakistani arrest: ಬೆಂಗಳೂರಿನಲ್ಲೂ(Bengaluru) ಉಗ್ರರ(Terrorist) ಹೆಜ್ಜೆ ಗುರುತುಗಳು ಕಾಣಲಾರಂಭಿಸಿದೇಯಾ ಎಂಬ ಗುಮಾನಿ ಆರಂಭವಾಗಿದೆ. ರಾಮೇಶ್ವರ ಕೆಪೆ ಬ್ಲಾಸ್ಟ್‌(Rameshwara Café blast) ನಂತರ ಗುಪ್ತಚರ ಇಲಾಖೆ(INA) ಬೆಂಗಳೂರು ನಗರದ ಮೇಲೆ ಒಂದು ಕಣ್ಣಿಟ್ಟಿದೆ. ಕಳೆದ ಮೂರು ದಿನಗಳ ಹಿಂದೆ ನಿಷೇಧಿತ ಉಲ್ಫಾ(ULFA-I) ಸಂಘಟನೆಗೆ ಸೇರಿದ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಅಸ್ಸಾಂ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. ಇದೀಗ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ‌ಓರ್ವ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಬಳಿ ಪಾಕಿಸ್ತಾನ ಪ್ರಜೆ ಸೇರಿ ನಾಲ್ವರ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಜಿಗಣಿ ಬಳಿಯ ಅಪಾರ್ಟ್ಮೆಂಟ್ ನಲ್ಲಿ ಕುಟುಂಬ ಸಮೇತ ವಾಸವಿದ್ದರು. ರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಗಣಿ ಪೊಲೀಸರಿಂದ ಪಾಕ್ ಸೇರಿ ನಾಲ್ವರು ವಿದೇಶಿ ಪ್ರಜೆಗಳ ಬಂಧನವಾಗಿದೆ. ಪಾಕ್ ಪ್ರಜೆ ಪತ್ನಿ ಬಾಂಗ್ಲಾದೇಶದವಳು, ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದ. ಬಂದಿತ ವ್ಯಕ್ತಿ ಮೂಲತ ಪಾಕಿಸ್ತಾನದ ಪ್ರಜೆ ಎಂದು ಹೇಳಲಾಗುತ್ತಿದೆ.

ಧರ್ಮದ ವಿಚಾರದಲ್ಲಿ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೊನೆಗೆ ಅಲ್ಲಿ ಇರೋಕೆ ಆಗದೆ ಬಾಂಗ್ಲಾದೇಶಕ್ಕೆ ಎಸ್ಕೇಪ್ ಆಗಿದ್ದ. ಇದಾದ ಬಳಿಕ ಬಾಂಗ್ಲಾದೇಶದ ಢಾಕಾದಲ್ಲಿ ವಾಸವಿದ್ದ. ಢಾಕಾದಲ್ಲಿ ಇದ್ದುಕೊಂಡು ಅಲ್ಲಿನ ಯುವತಿಯ ವಿವಾಹವಾಗಿದ್ದ. ಬಳಿಕ 2014ರಲ್ಲಿ ಪತ್ನಿ ಜೊತೆ ಅಕ್ರಮವಾಗಿ ದೆಹಲಿಗೆ ಬಂದಿದ್ದ. ಸ್ಥಳೀಯ ವ್ಯಕ್ತಿಯ ನೆರವಿನಿಂದ ಗುರುತಿನ ದಾಖಲೆಗಳು ಸೃಷ್ಟಿ ಮಾಡಿಸಿ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಎಲ್ಲವನ್ನು ಮಾಡಿಸಿಕೊಂಡಿದ್ದ.

2018ರಲ್ಲಿ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದ. ಇಬ್ಬರು ಮಕ್ಕಳ ಜೊತೆಗೆ ದಂಪತಿಯ ಜಿಗಣಿಯಲ್ಲಿ ವಾಸವಿದ್ರು. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಆಧಾರದ ಮೇಲೆ ನಿನ್ನೆ ಆತನ ಮನೆಗೆ ದಾಳಿ ಮಾಡಿ ಬಂಧಿಸಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಮಾಡಲಾಗಿದೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ.

You may also like

Leave a Comment