Home » Sana Yusuf: ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್ ಕೊಲೆ: ಗುಂಡಿಕ್ಕಿ ಹತ್ಯೆಗೈದ ಅತಿಥಿ

Sana Yusuf: ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್ ಕೊಲೆ: ಗುಂಡಿಕ್ಕಿ ಹತ್ಯೆಗೈದ ಅತಿಥಿ

0 comments

Sana Yusuf: ಪಾಕಿಸ್ತಾನದ 17 ವರ್ಷದ ಟಿಕ್ ಟಾಕ್ ಸ್ಟಾರ್ ಸನಾ ಯೂಸುಫ್ ಅನ್ನು ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ಸೋಮವಾರ ನಡೆದಿದ್ದು ಅಪರಿಚಿತ ದುಷ್ಕರ್ಮಿಯೊಬ್ಬ ಈ ರೀತಿ ಮಾಡಿದ್ದಾನೆ.

ಪಾಕಿಸ್ತಾನದ ಚಿತ್ರಾಲ್ ಮೂಲದ ಈಕೆ ಟಿಕ್ ಟಾಕ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದಳು. ಹತ್ಯೆಗೈದ ದುಷ್ಕರ್ಮಿಯು ಆಕೆಯ ಮನೆಗೆ ಅತಿಥಿಯಾಗಿ ಬಂದಿರಬಹುದು ಎಂದು ಮಾಧ್ಯಮ ಗಳು ವರದಿ ಮಾಡಿವೆ. ಘಟನೆಯ ನಂತರ ಆರೋಪಿಯು ಅಲ್ಲಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

You may also like