Home » ಸಚಿವ-ಶಾಸಕರ ಸರದಿಯ ಬಳಿಕ ಶಾಸಕಿಯೊಬ್ಬರ ಅಶ್ಲೀಲ ವೀಡಿಯೋ ವೈರಲ್!! ತಿರುಚಿದೆ ಎನ್ನಲಾದ ವೀಡಿಯೋದಲ್ಲಿ ಅಸಲಿ ನಾಯಕಿ ಯಾರು?!

ಸಚಿವ-ಶಾಸಕರ ಸರದಿಯ ಬಳಿಕ ಶಾಸಕಿಯೊಬ್ಬರ ಅಶ್ಲೀಲ ವೀಡಿಯೋ ವೈರಲ್!! ತಿರುಚಿದೆ ಎನ್ನಲಾದ ವೀಡಿಯೋದಲ್ಲಿ ಅಸಲಿ ನಾಯಕಿ ಯಾರು?!

0 comments

ಪಾಕಿಸ್ತಾನ:ಮಹಿಳಾ ಶಾಸಕಿಯೊಬ್ಬರ ಅಶ್ಲೀಲ ವೀಡಿಯೋ ಎನ್ನಲಾದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೂಡಲೇ ಎಚ್ಚೆತ್ತ ಶಾಸಕಿ ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದ್ದು, ಘಟನೆಗೆ ಕಾರಣವಾದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಪಂಜಾಬ್ ತಕ್ಷಲಾ ವಿಧಾನಸಭಾ ಕ್ಷೇತ್ರದ ಮುಸ್ಲಿಂ -ಲೀಗ್ -ನವಾಜ್ ಶಾಸಕಿ ಸಾನಿಯಾ ಆಶಿಕ್ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ತುಣುಕೊಂದು ಸದ್ದು ಮಾಡಿದ್ದು,ಪ್ರಕರಣದ ಗಂಭೀರತೆ ಅರಿತ ಕೂಡಲೇ ಶಾಸಕಿ ಠಾಣೆಯ ಮೆಟ್ಟಿಲೇರಿದಲ್ಲದೇ, ಅದರಲ್ಲಿ ಇರುವುದು ತಾನಲ್ಲ, ಅದೊಂದು ತಿರುಚಿದ ವೀಡಿಯೋ ಎಂದು ಸ್ಪಷ್ಟನೆ ನೀಡಿದ್ದರು ಎಂದು ಅಲ್ಲಿನ ಮಾಧ್ಯಮವೊಂದು ಪ್ರಸಾರ ಮಾಡಿದೆ.

ಅಸಲಿಗೆ ವಿಡಿಯೋದಲ್ಲಿರುವುದು ಯಾರು?
ಅಕ್ಟೋಬರ್ 26 ರಂದು ವೈರಲ್ ಆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತ ಎಲ್ಲರ ಬಳಿಗೂ ತಲುಪಿತ್ತು. ಈ ಮಧ್ಯೆ ಶಾಸಕಿ ದೂರನ್ನು ನೀಡಿದ್ದು, ಪೊಲೀಸರು ಲಾಹೋರ್ ನಲ್ಲಿ ಓರ್ವನನ್ನು ಬಂಧಿಸಿದ್ದರು. ಇದಾದ ಬಳಿಕ ಅಸಲಿಗೆ ವೀಡಿಯೋ ದಲ್ಲಿ ಯಾರು ಇದ್ದಾರೆ ಎಂಬುವುದನ್ನು ಯಾವ ಮೂಲಗಳು ಕೂಡಾ ಬಹಿರಂಗಪಡಿಸಿಲ್ಲವಾದರೂ ಸಾನಿಯಾ ಆಶಿಕ್ ಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅಲ್ಲಿನ ಮಾಧ್ಯಮಗಳು ಪ್ರಸಾರಮಾಡಿವೆ.

You may also like

Leave a Comment