Home » Palaash Mucchal-Smriti Mandhana: ನಿರ್ದೇಶಕ-ಸಂಯೋಜಕ ಪಲಾಶ್ ಮುಚ್ಚಲ್ ಮತ್ತು ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂಧಾನಾ ಮದುವೆ ದೃಢ

Palaash Mucchal-Smriti Mandhana: ನಿರ್ದೇಶಕ-ಸಂಯೋಜಕ ಪಲಾಶ್ ಮುಚ್ಚಲ್ ಮತ್ತು ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂಧಾನಾ ಮದುವೆ ದೃಢ

0 comments

Marriage: ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚಲಲ್ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಮಂಧಾನ ಮತ್ತು ಮುಚ್ಚಲ್ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ವೈರಲ್‌ ಆಗಿದ್ದು, ಊಹಾಪೋಹಗಳು ಹರಡಿದ್ದವು. ಆದರೂ, ಅವರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ದೃಢಪಡಿಸಿರಲಿಲ್ಲ. ಈಗ 30 ವರ್ಷದ ಸಂಗೀತ ನಿರ್ದೇಶಕ ಪಲಾಶ್‌ ಮುಚಲಲ್‌ ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ (29) “ಇಂದೋರ್‌ನ ಸೊಸೆ” ಆಗಲಿದ್ದಾರೆ ಎಂದು ದೃಢಪಡಿಸದ್ದಾರೆ.

ಈ ಜೋಡಿ ಆರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು, ಕಳೆದ ವರ್ಷ ಇನ್‌ಸ್ಟಾಗ್ರಾಮ್ ಅಧಿಕೃತವಾಗಿ ಘೋಷಣೆ ಮಾಡಿದ್ದರು.

ರಾಜ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಮುಚ್ಚಲ್, “ಅವರು ಶೀಘ್ರದಲ್ಲೇ ಇಂದೋರ್‌ನ ಸೊಸೆಯಾಗಲಿದ್ದಾರೆ… ನಾನು ಹೇಳಲು ಬಯಸುವುದು ಇಷ್ಟೇ” ಎಂದು ಹೇಳಿದರು, ನಗುವಿನೊಂದಿಗೆ ಸುದ್ದಿಯನ್ನು ದೃಢಪಡಿಸಿದರು.

You may also like