Home » ಪಾಲಕ್ಕಾಡ್ : ಆರ್‌ಎಸ್‌ಎಸ್ ಕಾರ್ಯಕರ್ತನ ಕೊಲೆ ,ಪತ್ನಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎಸ್‌.ಡಿ.ಪಿ.ಐ ತಂಡದಿಂದ ಅಡ್ಡಗಟ್ಟಿ ಕೊಲೆ

ಪಾಲಕ್ಕಾಡ್ : ಆರ್‌ಎಸ್‌ಎಸ್ ಕಾರ್ಯಕರ್ತನ ಕೊಲೆ ,ಪತ್ನಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎಸ್‌.ಡಿ.ಪಿ.ಐ ತಂಡದಿಂದ ಅಡ್ಡಗಟ್ಟಿ ಕೊಲೆ

by Praveen Chennavara
0 comments

ತಿರುವನಂತಪುರಂ, ನವೆಂಬರ್ 15 ಸೋಮವಾರ ಬೆಳಗ್ಗೆ ಪಾಲಕ್ಕಾಡ್ ಜಿಲ್ಲೆಯ ಎಲ್ಲಪುಲ್ಲಿ ಎಂಬಲ್ಲಿ ಎಸ್‌ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಸದಸ್ಯರ ಗುಂಪಿನಿಂದ ಆರ್‌ಎಸ್‌ಎಸ್ ಕಾರ್ಯಕರ್ತ ಸಂಜಿತ್ ಎಂಬವರನ್ನು ಹತ್ಯೆ ಮಾಡಲಾಗಿದೆ.

ಬೆಳಗ್ಗೆ 9 ಗಂಟೆಗೆ ಯುವಕ ತನ್ನ ಪತ್ನಿಯೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ನಾಲ್ವರ ಗುಂಪು ಅಡ್ಡಗಟ್ಟಿ ಹಲ್ಲೆ ನಡೆಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪಾಲಕ್ಕಾಡ್ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಂ. ಹರಿದಾಸ್ ಇದು ಎಸ್‌ಡಿಪಿಐನ “ಉದ್ದೇಶಪೂರ್ವಕ” ರಾಜಕೀಯ ಕೊಲೆ ಎಂದು ಬಣ್ಣಿಸಿದರು.

“ಸಂಜಿತ್ ಎಂಬಾತ ತನ್ನ ಪತ್ನಿಯೊಂದಿಗೆ ಹೋಗುತ್ತಿದ್ದಾಗ ತಡೆದು ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ರಾಜ್ಯದಲ್ಲಿ ಎಸ್‌ಡಿಪಿಐಗೆ ಆಡಳಿತ ಪಕ್ಷದ ಬೆಂಬಲ ಸಿಕ್ಕಿದೆ” ಎಂದು ಆರೋಪಿಸಿದರು.

ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ.

ತಕ್ಷಣ ಸಂಜಿತ್‌ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಪ್ರದೇಶವನ್ನು ಸುತ್ತುವರಿದಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

You may also like

Leave a Comment