Aadhaar Pan Link : ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೀಡಿರುವ ಎಚ್ಚರಿಕೆಯ ಪ್ರಕಾರ, ಮಾರ್ಚ್ 31, 2023 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ (pan – aadhaar link ) ಮಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಸಾಕಷ್ಟು ಜನರ ಲಿಂಕ್ ಕಾರ್ಯ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಇದರ ಗಡುವನ್ನು ಜೂನ್ 30ಕ್ಕೆ ಮುಂದೂಡಲಾಗಿದೆ.
ಈಗಾಗಲೇ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕಿಂಗ್ ಗಡುವನ್ನು CBDT ಅಂದರೆ ಕೇಂದ್ರ ಸರ್ಕಾರದ ನೇರ ತೆರಿಗೆ ಮಂಡಳಿ ಹಲವಾರು ಬಾರಿ ವಿಸ್ತರಣೆ ಮಾಡಲಾಗಿದ್ದು, ಈ ಬಾರಿಯೂ ಜೂನ್ 30 ರೊಳಗೆ ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ ಎಂಬುದನ್ನು ಪ್ರತಿಯೊಂದು ಬ್ಯಾಂಕುಗಳು ಸೇರಿದಂತೆ ಎಲ್ಲಾ ವಿತ್ತ ಸಂಸ್ಥೆಗಳು ಕೂಡ ಸ್ಪಷ್ಟ ಪಡಿಸಿದೆ.
ಇನ್ನು IDFC FIRST BANK ಪ್ರಕಾರ ಒಂದು ವೇಳೆ 30ರ ವರೆಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡದೆ ಹೋದರೆ ಯಾವುದೇ ಲೋನ್ ಸೌಲಭ್ಯಗಳು ಸಿಗುವುದಿಲ್ಲ ಎಂಬುದಾಗಿ ತಿಳಿಸಿದೆ.
ಒಂದು ವೇಳೆ ಜೂನ್ 30ರ ಒಳಗೆ ಆಧಾರ್ ಜೊತೆಗೆ ಪ್ಯಾನ್ ಕಾರ್ಡ್(Pan Card) ಅನ್ನು ಲಿಂಕ್ ಮಾಡದೆ ಹೋದರೆ ಸಾಕಷ್ಟು ಸೌಲಭ್ಯ ಹಾಗೂ ಯೋಜನೆಗಳು ಕೂಡ ರದ್ದಾಗುವ ಸಾಧ್ಯತೆ ಹೆಚ್ಚಾಗಿದ್ದು ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಸಲಾಗಿದೆ.
ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡ ನಂತರ ಟ್ಯಾಕ್ಸ್ ಕೂಡ ಹೆಚ್ಚಾಗಿ ಕಡಿತಗೊಳ್ಳಲಿದ್ದು, ಹಾಗೂ ಆತ ಯಾವುದೇ ಪ್ಯಾನ್ ನಂಬರನ್ನು ಹೊಂದಿಲ್ಲ ಎನ್ನುವ ಅಮಾನ್ಯತೆಯ ಮಾನ್ಯತೆಯನ್ನು ಕೂಡ ನೀಡಲಾಗುತ್ತದೆ.
ಮುಖ್ಯವಾಗಿ ಈ ನಿಷ್ಕ್ರಿಯ ಗೊಂಡಿರುವ ಪ್ಯಾನ್ ಜೊತೆಗೆ ಯಾವುದೇ ರಿಟರ್ನ್ ಮಾಡುವ ಅವಕಾಶ ಯಾವುದೇ ಕಾರಣಕ್ಕೂ ನೀಡುವುದಿಲ್ಲ.
ಇನ್ನು ಪೆಂಡಿಂಗ್ ಆಗಿರುವಂತಹ ಐಟಿ ಫೈಲ್ ರಿಟರ್ನ್ ಪ್ರೋಸೆಸ್ ಅಲ್ಲಿಯೇ ಸ್ತಬ್ಧವಾಗುತ್ತದೆ. ಪ್ರೊಸೆಸ್ ನಲ್ಲಿರುವಂತಹ ಕಾರ್ಯಗಳು ಕೂಡ ಯಾವುದೇ ಚಲನೆಯನ್ನು ಪಡೆದುಕೊಳ್ಳುವುದಿಲ್ಲ ಹಾಗೂ ಎಲ್ಲಾ ಕೆಲಸಗಳು ನಿಂತಲ್ಲಿಯೇ ನಿಂತುಕೊಳ್ಳುತ್ತದೆ.
ಒಂದು ವೇಳೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಬ್ಯಾಂಕಿಂಗ್ ಸೇರಿದಂತೆ ಹಲವಾರು ಫೈನಾನ್ಸಿಯಲ್ ಕೆಲಸಗಳಲ್ಲಿ ಊಹಿಸಲು ಕೂಡ ಸಾಧ್ಯವಾಗದಂತಹ ಸಮಸ್ಯೆ ಬರಬಹುದು. ಹೀಗಾಗಿ ಜೂನ್ 30ರ ಒಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್(Aadhar Card) ಜೊತೆಗೆ ಲಿಂಕ್ ಮಾಡಲು ಸರ್ಕಾರ ಸೂಚಿಸಿದೆ.
