Home » Helicopter Ride: ಮಗಳನ್ನು ಗಂಡನ ಮನೆಗೆ ಕಳುಹಿಸಿದ ಅಪ್ಪ- ಅಮ್ಮ!! ಯಾವುದ್ರಲ್ಲಿ ಅಂತ ಗೊತ್ತಾದ್ರೆ ಹೌಹಾರುತ್ತೀರಾ

Helicopter Ride: ಮಗಳನ್ನು ಗಂಡನ ಮನೆಗೆ ಕಳುಹಿಸಿದ ಅಪ್ಪ- ಅಮ್ಮ!! ಯಾವುದ್ರಲ್ಲಿ ಅಂತ ಗೊತ್ತಾದ್ರೆ ಹೌಹಾರುತ್ತೀರಾ

1 comment
Helicopter Ride

Newly Married Couple: ಮದುವೆ (Marriage)ಎಂಬುದು ಎರಡು ಜೋಡಿಯ ಬೆಸೆಯುವ ಕೊಂಡಿ ಮಾತ್ರವಲ್ಲ ಎರಡು ಕುಟುಂಬವನ್ನು ಒಟ್ಟಾಗಿಸುವ ಸುಂದರ ಬಂಧವಾಗಿದೆ.ಮದುವೆಯ ಬಳಿಕ ತಮ್ಮ ಮಗಳನ್ನು ಖುಷಿಯಿಂದ ಗಂಡನ ಮನೆಗೆ ಕಳುಹಿಸಬೇಕು (Newly Married Couple)ಎಂಬುದು ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ.

ಬಿಹಾರದ ಜೆಹಾನಾಬಾದ್ ಜಿಲ್ಲೆಯ ದಂಪತಿಯೊಬ್ಬರು ತಮ್ಮ ಮಗಳನ್ನು ಮದುವೆಯಾದ ಬಳಿಕ ಸ್ಮರಣೀಯ ರೀತಿಯಲ್ಲಿ ಮಗಳನ್ನು ಕಳುಹಿಸಿಕೊಡುವ ಯೋಜನೆ ಹಾಕಿಕೊಂಡಿದ್ದರು. ಮಹದಿಪುರ್ ಗ್ರಾಮದ ದಂಪತಿಗಳು ಮದುವೆಯ ಬಳಿಕ ಎಲ್ಲಾ ಕಾರ್ಯಗಳನ್ನು ಮುಗಿದ ನಂತರ ತಮ್ಮ ಮಗಳು ಅಳಿಯನನ್ನು ಹೆಲಿಕಾಪ್ಟರ್‌ನಲ್ಲಿ ಕಳುಹಿಸಿಕೊಟ್ಟಿದ್ದಾರೆ.

ತಮ್ಮ ಹುಟ್ಟೂರಾದ ಜೆಹಾನಾಬಾದ್ನಿಂದ ಮಗಳನ್ನು ಹೆಲಿಕಾಪ್ಟರ್ನಲ್ಲಿ ಕಳುಹಿಸಿಕೊಡಬೇಕು ಹಾಗೂ ಊರಿನವರು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಬೇಕು ಎಂಬುದು ತಾಯಿಯ ಅಭಿಲಾಷೆಯಾಗಿತ್ತು. ಆದರೆ, ಜೆಹಾನಾಬಾದ್‌ನಿಂದ ಹೆಲಿಕಾಪ್ಟರ್ ಹಾರಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ ಎನ್ನಲಾಗಿದೆ. ವಧು-ವರರಿಬ್ಬರೂ ವೈದ್ಯರಾಗಿದ್ದು, ಇಬ್ಬರೂ ಗಯಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆನ್ನಲಾಗಿದೆ.

ಪೋಷಕರ ಅಭಿಲಾಷೆಯಂತೆ ವಧು -ವರರಿಗೆ ಬರೋಬ್ಬರಿ 8.75 ಲಕ್ಷ ರೂ.ಗೆ ಹೆಲಿಕಾಪ್ಟರ್ ಬುಕ್ ಮಾಡಲಾಗಿದ್ದು, ನವೆಂಬರ್ 17ರಂದು ಹೆಲಿಕಾಪ್ಟರ್ ಕಾರ್ಯಾಚರಣೆಗೆ ಅನುಮತಿ ನೀಡುವಂತೆ ಜೆಹಾನಾಬಾದ್ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಮದುವೆಯಾದ 24 ಗಂಟೆಯೊಳಗೆ ಹೆಲಿಕಾಪ್ಟರ್ ಗೆ ಅನುಮತಿ ಸಿಕ್ಕಿರಲಿಲ್ಲ. ಕೊನೆಗೆ ಮಗಳು ಮತ್ತು ಅಳಿಯನನ್ನು ಗಯಾ ವಿಮಾನ ನಿಲ್ದಾಣದಿಂದ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿ: Crime News: ಪ್ರಿಯಕರನ ಮೊಬೈಲಿಲ್ಲಿತ್ತು 13ಸಾವಿರ ಯುವತಿಯರ ನಗ್ನ ಫೋಟೋ! ಪ್ರೇಯಸಿ ಶಾಕ್‌, ಮಂಗಳೂರು ಮೂಲದ ಟೆಕ್ಕಿ ಬಂಧನ!!

You may also like

Leave a Comment