4
Mandya: ಪಾಕಿಸ್ತಾನದ ವಿರುದ್ಧ ‘ಆಪ ರೇಷನ್ ಸಿಂದೂರ’ ಕಾರ್ಯಾಚರಣೆ ಯಶಸಿ ಯಶಸ್ವಿಯಾದ ಹಿನ್ನೆ ಲೆಯಲ್ಲಿ ದಂಪತಿಯೊಬ್ಬರು ಮಗುವಿಗೆ ‘ಸಿಂದೂರಿ’ ಎಂದು ಹೆಸರಿಟ್ಟು ನಾಮಕರಣ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದ ಸೋಮಶೇಖರ್ ಹಾಗೂ ಹರ್ಷಿತಾ ದಂಪತಿ ತಮ್ಮ ಮಗುವಿಗೆ ಸಿಂದೂರಿ ಎಂದು ನಾಮಕರಣ ಮಾಡಿದ್ದಾರೆ. ಈ ಸುದ್ದಿ ತಿಳಿದು ಮಂಡ್ಯ ರಕ್ಷಣಾ ವೇದಿಕೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಶಂಕಲ್‌ಬಾಬು ನೇತೃತ್ವದಲ್ಲಿ ದಂಪತಿಗೆ ಸನ್ಮಾನಿಸಿದ್ದಾರೆ.
ಮಗುವಿಗೆ ಭವಿಷ್ಯದಲ್ಲಿ ವಿದ್ಯಾಭ್ಯಾಸದ ನೆರವಿಗಾಗಿ ₹10 ಸಾವಿರವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಆರ್ಥಿಕ ನೆರವು ನೀಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
