Home » ಪರ್ಲಡ್ಕ ಸ.ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿಗೆ ಅಧ್ಯಕ್ಷರಾಗಿ ಸುಚಿತ್ರಾ, ಉಪಾಧ್ಯಕ್ಷರಾಗಿ ಉದಯ ಆಯ್ಕೆ

ಪರ್ಲಡ್ಕ ಸ.ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿಗೆ ಅಧ್ಯಕ್ಷರಾಗಿ ಸುಚಿತ್ರಾ, ಉಪಾಧ್ಯಕ್ಷರಾಗಿ ಉದಯ ಆಯ್ಕೆ

by Praveen Chennavara
0 comments

ಪುತ್ತೂರು: ಪರ್ಲಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ನೂತನ ಶಾಲಾಭಿವೃದ್ದಿ ಸಮಿತಿ ರಚನೆಗಾಗಿ ಪೋಷಕರ ಸಭೆಯು ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಅಧ್ಯಕ್ಷೆ ಸುಚಿತ್ರಾ

ಶಾಲಾ ಮುಖ್ಯಗುರು ಮನೋರಮಾ ಕೆ.ಅವರು ಎಸ್.ಡಿ.ಎಂ.ಸಿ ರಚನೆಯ ಪ್ರಕ್ರಿಯೆ ಹಾಗೂ ಸದಸ್ಯರ ಆಯ್ಕೆ ನಡೆಸಲಾಯಿತು.ಸಮಿತಿಗೆ18 ಸದಸ್ಯರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷ ಉದಯ್

ನೂತನ ಅಧ್ಯಕ್ಷರಾಗಿ ಸುಚಿತ್ರಾ,ಉಪಾಧ್ಯಕ್ಷರಾಗಿ ಉದಯ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಸದಸ್ಯರಾಗಿ ಸೀತಾಲಕ್ಷ್ಮೀ,ರತ್ನಾವತಿ,ದಿವ್ಯಾ,ಗೀತಾ,ಸರ್ವಾಣಿ,ಶಹನಾಝ್,ರಮೀಝ,ಸಿದ್ದಪ್ಪ ಗೋವಿಂದಪ್ಪ ಕೋಲಕಾರ,ಸುಜಾತ,ಶ್ರೀಧರ ಪೂಜಾರಿ, ಪ್ರೇಮಾ,ಸುನಿತಾ,ಸೌಮ್ಯ, ರೇಖಾ,ರಾಜೀವಿ ಗೌಡ, ರಮೇಶ್ ಗೌಡ ಅವರನ್ನು ಆಯ್ಕೆಮಾಡಲಾಯಿತು.

ಶಾಲಾ ಶಿಕ್ಷಕಿ ವತ್ಸಲಾ ಬಿ.ಅವರು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವಾಣಿಶ್ರೀ ವಂದಿಸಿದರು. ಶಿಕ್ಷಕಿ ಅಕ್ಷತಾ ,ಅಕ್ಷರ ದಾಸೋಹ ಸಿಬ್ಬಂದಿಗಳು ಸಹಕರಿಸಿದರು.

You may also like

Leave a Comment