Parle-G Biscuit: ಪಾರ್ಲೆಜಿ ಬಿಸ್ಕೆಟ್ (Parle-G Biscuit)ಎಂದರೆ ಗೊತ್ತಿಲದೇ ಇರುವವರೇ ವಿರಳ. 80-90ರ ದಶಕಗಳಲ್ಲಿ ಹುಟ್ಟಿ ಬೆಳದವರಿಗಂತು ಪಾರ್ಲೆ-ಜಿ ಬಿಸ್ಕೆಟ್ ಅಚ್ಚುಮೆಚ್ಚು ಎಂದರೆ ತಪ್ಪಾಗಲಾರದು. ಚಿಕ್ಕವರು ದೊಡ್ಡವರು ಎನ್ನದೇ ಈ ಬಿಸ್ಕೆಟ್(Biscuit)ಖರೀದಿ ಮಾಡಲು ಜನರು ಮುಗಿ ಬೀಳುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಪಾರ್ಲೆ-ಜಿ ಬಿಸ್ಕೆಟ್ ಜೊತೆಗೆ ಕಾಫಿ ಇಲ್ಲವೇ ಟೀ ಕುಡಿಯುವ ಅಭ್ಯಾಸ ಇಟ್ಟುಕೊಂಡವರು ಅದೆಷ್ಟೋ ಮಂದಿ. ಬಾಲ್ಯದಿಂದಲೂ ಪ್ರತಿಯೊಬ್ಬ ಭಾರತೀಯರ ಮೆಚ್ಚಿನ ಬಿಸ್ಕೆಟ್ ನಲ್ಲಿ ಪಾರ್ಲೆ ಜೀ ಕೂಡ ಒಂದು. ಆದರಲ್ಲಿ ವಿಶೇಷವಾಗಿ ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್‌ನಲ್ಲಿರುವ ಪುಟ್ಟ ಬಾಲಕಿಯ ಪೋಟೋ ಹೆಚ್ಚಿನವರಿಗೆ ಅಚ್ಚುಮೆಚ್ಚು.
ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್‌ನ್ನು ಆ ಪುಟ್ಟ ಮಗುವಿನ ಫೋಟೋವಿಲ್ಲದೆ ಊಹಿಸುವುದು ಸುಲಭವಲ್ಲ ಅಷ್ಟರ ಮಟ್ಟಿಗೆ ಹಳದಿ ಬಣ್ಣದ ರ್ಯಾಪರ್‌ನಲ್ಲಿ (Yellow rapper)ಪುಟ್ಟ ಮಗುವಿನ ಚಿತ್ರ ಹೆಚ್ಚಿನವರ ಮನಸ್ಸಿನಲ್ಲಿ ಭದ್ರವಾಗಿ ನೆಲೆಯೂರಿದೆ. ಆದರೆ ಇತ್ತೀಚಿಗೆ ಪಾರ್ಲೆ-ಜಿ ಐಕಾನಿಕ್ ಹುಡುಗಿಯ ಚಿತ್ರವನ್ನು ಈ ಇನ್‌ಸ್ಟಾಗ್ರಾಮ್ ಪ್ರಭಾವಶಾಲಿ ಮುಖದೊಂದಿಗೆ ಬದಲಾಯಿಸಿದೆ.
ಬಿಸ್ಕತ್ತು ತಯಾರಕ ಪಾರ್ಲೆ ತನ್ನ ಪ್ಯಾಕೆಟ್‌ನ ಕವರ್‌ನಲ್ಲಿ ಐಕಾನಿಕ್ ಪಾರ್ಲೆ-ಜಿ ಹುಡುಗಿಯ ಬದಲಿಗೆ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮುಖವನ್ನು ಒಳಗೊಂಡ ಪೋಸ್ಟ್‌ನ್ನು ಹಂಚಿಕೊಳ್ಳಲಾಗಿದೆ. ಹೆಚ್ಚಿನ ಮಂದಿ ಈ ರ್ಯಾಪರ್ ಬದಲಾವಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳ ಇತಿಹಾಸವಿರುವ ಪಾರ್ಲೆ ಜಿ ಬಿಸ್ಕೆಟ್‌ನ ಕವರ್ ಬದಲಾಯಿಸಿರುವುದು ಹೆಚ್ಚಿನವರ ಬೇಸರಕ್ಕೆ ಕಾರಣವಾಗಿದೆ. ಆದರೆ, ಪಾರ್ಲೆ ಜಿ ಕಂಪೆನಿ ತನ್ನ ಬಿಸ್ಕೆಟ್ ಕವರ್‌ನಿಂದ ಮಗುವಿನ ಫೋಟೋವನ್ನು ಬದಲಾಯಿಸಿಲ್ಲ. ಬದಲಿಗೆ ಇದು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ತಮಾಷೆಗೆ ಮಾಡಿರುವ ವೀಡಿಯೋ ಇದಾಗಿದೆ.

ಝೆರ್ವಾನ್ ಜೆ ಬುನ್‌ಶಾ ಎಂಬುವವರು ಕಂಟೆಂಟ್ ಕ್ರಿಯೇಟರ್ ಒಬ್ಬರು ಈ ವೀಡಿಯೋವನ್ನು ಮಾಡಿದ್ದು, ಸದ್ಯ ವೈರಲ್ ಆಗಿದೆ. ವೀಡಿಯೋದಲ್ಲಿ ಅವರು, ‘ನೀವು ಪಾರ್ಲೆ ಮಾಲೀಕರನ್ನು ಭೇಟಿಯಾದರೆ, ಅವರನ್ನು ಪಾರ್ಲೆ ಸರ್, ಮಿ. ಪಾರ್ಲೆ ಅಥವಾ ಪಾರ್ಲೆ ಜಿ ಹೇಗೆ ಕರೆಯುತ್ತೀರಿ’ ಎಂದು ಪ್ರಶ್ನಿಸಿದ್ದಾರೆ. ಬುನ್‌ಶಾಹ್ ಫೋಟೋ ಇರುವ ಪಾರ್ಲೆ-ಜಿ ಪ್ಯಾಕೆಟ್ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, ಬುನ್‌ಶಾಹ್ ಕಾರಿನಲ್ಲಿ ಗೊಂದಲದ ಮುಖದೊಂದಿಗೆ ಕುಳಿತಿರುವ ದೃಶ್ಯ ಕಂಡುಬರುತ್ತದೆ. ಈ ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
https://www.instagram.com/reel/C1OsTw5MbpX/?igsh=MW42MG80MHBsM2ljaw==
