Home » Parliament Election : ಜಗದೀಶ್ ಶೆಟ್ಟರ್ ಟಿಕೆಟ್ ಬಗ್ಗೆ ಪ್ರಹ್ಲಾದ್ ಜೋಶಿಯಿಂದ ಹೊಸ ಸತ್ಯ ಬಹಿರಂಗ !!

Parliament Election : ಜಗದೀಶ್ ಶೆಟ್ಟರ್ ಟಿಕೆಟ್ ಬಗ್ಗೆ ಪ್ರಹ್ಲಾದ್ ಜೋಶಿಯಿಂದ ಹೊಸ ಸತ್ಯ ಬಹಿರಂಗ !!

1 comment
Parliament Election

Parliament Electionಗೆ ಬಿಜೆಪಿ ಎರಡನೇ ಪಟ್ಟಿ ಪ್ರಕಟ ಮಾಡಿದ್ದು ಕರ್ನಾಟಕದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಮೈತ್ರಿ ಕ್ಷೇತ್ರ ಹೊರತುಪಡಿಸಿ ಉಳಿದ 5 ಕ್ಷೇತ್ರಗಳ ಟಿಕೆಟ್ ಮೇಲೆ ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ಇದರಲ್ಲಿ ಜಗದೀಶ್ ಶೆಟ್ಟರ್(Jagadish shetter) ಕೂಡ ಒಬ್ಬರು. ಈ ಬೆನ್ನಲ್ಲೇ ಕೇಂದ್ರ ನಾಯಕ ಪ್ರಹ್ಲಾದ್ ಜೋಷಿ ಅವರು ಜಗದೀಶ್ ಶೆಟ್ಟರ್ MP ಟಿಕೆಟ್ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: Vitla: ಅಡ್ಯನಡ್ಕ ಕರ್ನಾಟಕ ಬ್ಯಾಂಕ್‌ ಕಳವು ಪ್ರಕರಣ; ಮೂವರು ಅಂತರಾಜ್ಯ ಕಳ್ಳರ ಬಂಧನ, ಆರೋಪಿಗಳನ್ನು ಪತ್ತೆ ಮಾಡಿದ ತಂಡಕ್ಕೆ ಬಹುಮಾನ ಘೋಷಣೆ

ಹೌದು, ಲೋಕಸಭಾ ಚುನಾವಣೆಯಲ್ಲಿ(Parliament election) ಧಾರವಾಡ(Dharwada) ಇಲ್ಲವೇ ಹಾವೇರಿಯಿಂದ ಟಿಕೆಟ್ ಬಯಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ನಿರಾಸೆಯಾಗಿದೆ. ಈ ಬೆನ್ನಲ್ಲೇ ಶೆಟ್ಟರ್ ಗೆ ಟಿಕೆಟ್ ಮಿಸ್ ಆಗಿದ್ದರ ಕುರಿತು ಪ್ರಹ್ಲಾದ್ ಜೋಶಿ(Prahlad joshi)ಯವರು ಅಪ್ಡೇಟ್ ಕೊಟ್ಟಿದ್ದಾರೆ.

ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಟೆಂಪಲ್ ರನ್ ಮಾಡುತ್ತಿರುವ ಜೋಷಿಯವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಶೆಟ್ಟರ್ ಗೆ ಟಿಕೆಟ್ ಮಿಸ್ ಆದ ಪ್ರಶ್ನೆಗೆ ಉತ್ತರಿಸಿದ್ದು ಎರಡು ಕ್ಷೇತ್ರಗಳಲ್ಲಿ ಟಿಕೆಟ್ ಬಯಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹೆಸರು ಮೂರನೇ ಕ್ಷೇತ್ರವಾದ ಬೆಳಗಾವಿ ಕ್ಷೇತ್ರಕ್ಕೆ ಕೇಳಿ ಬರುತ್ತಿದೆ. ಬೆಳಗಾವಿಯಿಂದ ಅವರ ಜೊತೆಗೆ ಬೇರೆ ಅಭ್ಯರ್ಥಿಗಳ ಹೆಸರು ಇದೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದರ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮಸೀದಿ ಮುಂಭಾಗ ಪಾನಿಪೂರಿ ತಿಂದ 19 ಮಕ್ಕಳು ಅಸ್ವಸ್ಥ, ನಾಲ್ಕು ಮಕ್ಕಳ ಸ್ಥಿತಿ ಗಂಭೀರ

You may also like

Leave a Comment