ದೂರದ ದೇಶಕ್ಕೆ ಹೋಗಬೇಕಾದರೆ ಪಾಸ್ ಪೋರ್ಟ್ ಅಗತ್ಯ. ಹಾಗೆನೇ ಪಾಸ್ ಪೋರ್ಟ್ ಗೆ ಅಪ್ಲೈ ಮಾಡಬೇಕಾದರೆ ಪೊಲೀಸ್ ವೆರಿಫಿಕೇಶನ್ ಬಹಳ ಮುಖ್ಯ. ಹಾಗಾಗಿ ಈಗ ಕರ್ನಾಟಕ ಜಿಡಿಪಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು, ಪಾಸ್ ಪೋರ್ಟ್ ಗಾಗಿ ( Passport ) ಅರ್ಜಿ ಸಲ್ಲಿಸಿ, ಪೊಲೀಸ್ ವೆರಿಫಿಕೇಷನ್ ಗಾಗಿ ( Police Verification ) ಕಾಯುತ್ತಿರುವವರಿಗೆ ಜಿಡಿಪಿ ಕರ್ನಾಟಕ ( DGP Karnataka) ಬಹಳ ಮುಖ್ಯವಾದ ಸುದ್ದಿಯೊಂದನ್ನು ಹೇಳಿದ್ದಾರೆ. ಅದೇನೆಂದರೆ ಇನ್ಮುಂದೆ 21 ದಿನಗಳಲ್ಲಿ ಪೊಲೀಸ್ ವೆರಿಫಿಕೇಷನ್ ಪೂರ್ಣಗೊಳಿಸೋದಾಗಿ ತಿಳಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವಂತ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕ (ಡಿಜಿ-ಐಜಿಪಿ) ಪ್ರವೀಣ್ ಸೂದ್ ಅವರು, ನಾವು ಪ್ರತಿ ಪೊಲೀಸ್ ಪರಿಶೀಲನೆಯನ್ನು 21 ದಿನಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡುತ್ತೇವೆ (ಪಾಸ್ಪೋರ್ಟ್ ಪೊಲೀಸ್ ಪರಿಶೀಲನೆಗಾಗಿ ನಾವು ಕಾನೂನು ತೊಡಕುಗಳನ್ನು ಹೊರತುಪಡಿಸಿ ಸುಮಾರು 7 ದಿನಗಳನ್ನು ತೆಗೆದುಕೊಳ್ಳುತ್ತೇವೆ) ಎಂದಿದ್ದಾರೆ.
ಇನ್ನೂ ನೀವು 21 ದಿನಗಳ ಒಳಗೆ ಉತ್ತರವನ್ನು ಸ್ವೀಕರಿಸದಿದ್ದರೆ ನೀವು ಎಸ್ಪಿ / ಸಿಪಿಯನ್ನು ಭೌತಿಕವಾಗಿ ಭೇಟಿಯಾಗುವ ಹಕ್ಕನ್ನು ಹೊಂದಿದ್ದೀರಿ. ಇಲ್ಲದಿದ್ದರೆ ನಮ್ಮ ಪ್ರಕ್ರಿಯೆಗಳು 100% ಆನ್ ಲೈನ್ ನಲ್ಲಿವೆ ಎಂಬುದಾಗಿ ತಿಳಿಸಿದ್ದಾರೆ.
